Coastal Bulletin

ಬಂಟ್ವಾಳ : ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 51 ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಜ.1 ರಿಂದ 8 ರವರೆಗೆ ಮಂದಿರದಲ್ಲಿ ನಡೆಯಲಿದೆ.

ಜ.1 ರಂದು ಮಧ್ಯಾಹ್ನ 12.30 ಕ್ಕೆ ಮಹಾಪೂಜೆ . ಸಂಜೆ 6 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8 ಗಂಟೆಯ ಹೊತ್ತಿಗೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರಗಲಿದೆ. ರಾತ್ರಿ 10ರಿಂದ ಶಾರದಾ ಆರ್ಟ್ಸ್ ಮಂಜೇಶ್ವರ ಇವರ ಅಭಿನಯದ "ಯಾನ್ ಉಲ್ಲೆತ್ತ" ಎಂಬ ತುಳು ನಾಟಕ ಜರಗಲಿದೆ.

ಜ.2 ರಿಂದ 6ರ ತನಕ  ಪ್ರತಿ ಸಂಜೆ 6.30 ರಿಂದ 8.30 ರವರೆಗೆ

ಸಂಧ್ಯಾ ಭಜನೆ ನಡೆಯಲಿದೆ. ಜ.6 ರಂದು ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.

ಜ.7 ರಂದು 51 ನೇ ಏಕಾಹ ಭಜನೋತ್ಸವ ಪ್ರಾರಂಭವಾಗಲಿದೆ. ಜ.8 ರಂದು 51 ನೇ ಏಕಾಹ ಭಜನೋತ್ಸವ ಮಂಗಳಾಚರಣೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.30 ರಿಂದ 8.30 ರ ತನಕ ಆನಂದ ಭಜನೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment