ಫರಂಗಿಪೇಟೆ:ಹೆದ್ದಾರಿಯಲ್ಲೇ ಮಗುಚಿ ಬಿದ್ದ ಬಸ್, ಪ್ರಯಾಣಿಕರಿಗೆ ಗಾಯ

Coastal Bulletin
ಫರಂಗಿಪೇಟೆ:ಹೆದ್ದಾರಿಯಲ್ಲೇ ಮಗುಚಿ ಬಿದ್ದ ಬಸ್, ಪ್ರಯಾಣಿಕರಿಗೆ ಗಾಯ

ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಘಟನೆ ಫರಂಗಿಪೇಟೆ ಬಳಿ ನಡೆದಿದೆ. ಘಟನೆಯಿಂದ ಅನೇಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಫರಂಗಿಪೇಟೆಯ ಹತ್ತನೇ ಮೈಲಿಕಲ್ಲು ಎಂಬಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಹಾಗೂ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು

ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಖಲಿಸಲು ನೆರವಾದರು. ಪ್ರಯಾಣಿಕರು ಬೆಳಗ್ಗಿನ ನಿದ್ದೆಯ ಮಂಪರಿನಲ್ಲಿದ್ದು ಘಟನೆಯಿಂದ ಆತಂಕಗೊಂಡಿದ್ದರು ಎಂದು ತಿಳಿದು ಬಂದಿದೆ.

Leave a Comment