Coastal Bulletin

ಉಳ್ಳಾಲ:ಅಂಬ್ಲಮೊಗರು ಗ್ರಾಮ ಪಂಚಾಯತ್ ಗ್ರಾಮ ಸಹಾಯಕ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ.ಅಂಬ್ಲಮೊಗರುವಿನ ಪ್ರತಿಷ್ಟಿತ ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ (34) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ತನ್ನ ಮನೆಯ ಬೆಡ್ ರೂಮಿನಲ್ಲಿ ನಿತಿನ್ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಿತಿನ್ ಅಂಬ್ಲಮೊಗರು ಗ್ರಾಮ ಪಂಚಾಯತಿನಲ್ಲಿ ಗ್ರಾಮಕರಣಿಕರ ಸಹಾಯಕರಾಗಿದ್ದು ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು.ಇಂದು ಬೆಳಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುತ್ತಾರಿನವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು.

ಬಳಿಕ ಮನೆಗೆ ಮರಳಿದ ನಿತಿನ್ ರೂಮಿನೊಳಗೆ ಹೋಗಿದ್ದು,ಹೊರಗೆ ಬರದೇ ಇದ್ದಾಗ ಅನುಮಾನಗೊಂಡ ಅವರ ತಾಯಿ ರೂಮಿನೊಳಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.ಮೃತ ನಿತಿನ್ ಅವರು ತಾಯಿ, ಪತ್ನಿ, ಮೂರು ಸಹೋದರರನ್ನ ಅಗಲಿದ್ದಾರೆ. ಕೊಣಾಜೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment