ಮಂಗಳೂರು: ಹಿರಿಯ ಆಹಾರ ಉದ್ಯಮಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಂ. ಅಣ್ಣಪ್ಪ ಪೈ (74ವ) ಅಲ್ಪಕಾಲದ ಅಸ್ವಸ್ಥ್ಯದಿಂದ ಜೂ.29 ರಂದು ನಿಧನ ಹೊಂದಿದರು. ಅವರು ಪತ್ನಿ ನಿರ್ಮಲಾ ಪೈ ಪುತ್ರರಾದ ಉದ್ಯಮಿಗಳಾಗಿರುವ ಅರವಿಂದ ಪೈ, ಅಜಿತ್ ಪೈ ಅವರನ್ನು ಅಗಲಿದ್ದಾರೆ.
Read Moreಬಂಟ್ವಾಳ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಸಹಿತ ಮಳೆಗೆ ತಾಲ್ಲೂಕಿನ ಹಲವೆಡೆ ಮಣ್ಣು ಸಡಿಲಗೊಂಡು ಭೂ ಕುಸಿತ ಮತ್ತು ಮರ ಉರುಳಿ ಬಿದ್ದಿದೆ. ಮಾತ್ರವಲ್ಲದೆ ಹಲವು ಮನೆ ಮತ್ತು ಕೃಷಿ ಚಟುವಟಿಕೆಗೂ ಹಾನಿ ಉಂಟಾಗಿದೆ.
Read Moreಬೆಂಗಳೂರು: ಇಂದಿನಿಂದ ಭಾರತದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಹೀಗಾಗಿ, ತರಕಾರಿ, ಹಾಲು, ಹಣ್ಣು ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅಂಗಡಿಗಳಲ್ಲಿ ನಿಮಗೆ ಪ್ಲಾಸ್ಟಿಕ್ ಕವರ್ ಸಿಗುವುದಿಲ್ಲ. ಭಾರತ ಸರ್ಕಾರವು ಇಂದಿನಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಿದೆ.
Read Moreಸುಳ್ಯ : ಇಲ್ಲಿ ರಾತ್ರಿ 1.14 ಕ್ಕೆ ಮತ್ತೆ ಭೂಕಂಪನ ಸಂಭವಿಸಿದೆ. ಸಂಪಾಜೆಯಿಂದ ಪತ್ರಕರ್ತ ಹೇಮಂತ್ ಸಂಪಾಜೆ, ತೊಡಿಕಾನದಿಂದ ಸುಧಾಕರ ಅಡ್ಯಡ್ಕ, ಉಬರಡ್ಕದಿಂದ ಯು.ಎಸ್.ವೆಂಕಟ್ರಾಮ ಭಟ್ , ಗುತ್ತಿಗಾರಿನಿಂದ ಉನ್ನಿಕೃಷ್ಣನ್ ತಮಗಾದ ಕಂಪನದ ಅನುಭವವನ್ನು ಸುದ್ದಿಗೆ ತಿಳಿಸಿದ್ದಾರೆ.
Read Moreಬಂಟ್ವಾಳ: ಸುಮಾರು 54 ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿನ ಪ್ರತಿಷ್ಠಿತ ಬಂಟ್ವಾಳ ರೋಟರಿ ಕ್ಲಬ್ ಇದರ ಹಿರಿಯ ಸದಸ್ಯನಾಗಿ ಇದೀಗ 4 ಕಂದಾಯ ಜಿಲ್ಲೆ ಮುನ್ನಡೆಸುವ ಜಿಲ್ಲಾ ಗವರ್ನರ್ ಆಗಿ ಚುನಾವನೆಯಲ್ಲಿ ಆಯ್ಕೆಯಾಗಿದ್ದು, ಜು.3ರಂದು ಬೆಂಜನಪದವು ಶುಭಲಕ್ಷ್ಮಿ ಅಡಿಟೋರಿಯಂ ನಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಗವರ್ನರ್ ಎನ್.ಪ್ರಕಾಶ ಕಾರಂತ್ ಹೇಳಿದ್ದಾರೆ.
Read More