ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಗಾರ್ವೆಬಾವಿಪಾಳ್ಯದ ಶಿವಕುಮಾರ, ಸಾಗರ್ ಮತ್ತು ನವೀನ್ ಬಂಧಿತ ಆರೋಪಿಗಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿ 'ಆಗಸ್ಟ್ 11ರ ಮಧ್ಯರಾತ್ರಿ ಆರೋಪಿಗಳು ಶಾಸಕರ ಮನೆ ಮುಂದೆ ನಿಂತಿದ್ದ 2 ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಬಗ್ಗೆ ಮಾಹಿತಿ ಬಂದ ಬಳಿಕ ಬೊಮ್ಮನಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಿ ಅರೋಪಿಗಳ ಪತ್ತೆಗೆ 5 ವಿಶೇಷ ತಂಡ ರಚಿಸಲಾಗಿತ್ತು.ಸಿಸಿಟಿವಿ ದೃಶ್ಯ ಬಿಟ್ಟು ಆರೋಪಿಗಳ
ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.ಇಂದು ಸಂಜೆ ಆಗ್ನೇಯ ಡಿಸಿಪಿ ಜೋಶಿ ನೇತೃತ್ವದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಅರೋಪಿಗಳ ಪೈಕಿ ಸತೀಶ್ ರೆಡ್ಡಿ ಮನೆ ಕಾಂಪೌಂಡ್ ಒಳಗೆ ಬಂದು ಬೆಂಕಿ ಇಟ್ಟವನು ಒಬ್ಬ ಮಾತ್ರ, ಆತನೇ ಸಾಗರ್. ಉಳಿದ ಇಬ್ಬರು ಗೇಟ್ ಹೊರಗೆ ಇದ್ದಾರೆ. ಸಾಗರ್ ಎಂಬ ಬಂಧಿತ ಆರೋಪಿ ಮೂಲತಃ ನೇಪಾಳದಲ್ಲಿ ಹುಟ್ಟಿಬೆಳೆದಿರೋದು' ಎಂದು ತಿಳಿಸಿದ್ದಾರೆ.