ಕಟೀಲು ದುರ್ಗಾಪರಮೇಶ್ವರಿ ತಾಯಿ ಕುರಿತು ಆಶ್ಲೀಲ ಪದ ಬಳಸಿ ಅವಹೇಳನ ; ಇಂದು ಭ್ರಮರಾಂಬಿಕೆ ಮುಂದೆ ಕಣ್ಣೀರಿಟ್ಟು ಕ್ಷಮೆ ಕೇಳಿದ ಆಲ್ಬರ್ಟ್ ಫೆರ್ನಾಂಡೀಸ್

Coastal Bulletin
ಕಟೀಲು ದುರ್ಗಾಪರಮೇಶ್ವರಿ ತಾಯಿ ಕುರಿತು ಆಶ್ಲೀಲ ಪದ ಬಳಸಿ ಅವಹೇಳನ ; ಇಂದು ಭ್ರಮರಾಂಬಿಕೆ ಮುಂದೆ ಕಣ್ಣೀರಿಟ್ಟು ಕ್ಷಮೆ ಕೇಳಿದ ಆಲ್ಬರ್ಟ್ ಫೆರ್ನಾಂಡೀಸ್

ಮಂಗಳೂರು:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಯೋರ್ವ ಕ್ಷೇತ್ರಕ್ಕೆ ಬಂದು ತಪ್ಪನ್ನು ಒಪ್ಪಿಕೊಂಡು, ಕ್ಷಮೆಯಾಚಿಸಿದ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆಲ್ಬರ್ಟ್ ಫೆರ್ನಾಂಡಿಸ್ ಎಂಬವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿ ದಿನೇಶ್ ಎಂಬುವವರಿಗೆ ಸಂದೇಶ ಕಳುಹಿಸಿದ್ದರು. ಮೂಲತಃ ಬಜೈ ನಿವಾಸಿಯಾದ ಇವರು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು


ಘಟನೆಯ ಬಳಿಕ ಈ ವ್ಯಕ್ತಿ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದು ತಾನು ಮಾಡಿದ್ದು ತಪ್ಪೆಂದು ಕಣ್ಣೀರಿಟ್ಟು ಕ್ಷಮೆಯಾಚಿಸಿ, ಜೈಲಿಗೆ ಹಾಕಬೇಡಿ ಎಂದು ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಯಸ್ಸಿಗೆ ಮರ್ಯಾದೆ ನೀಡಿ ಬಜ್ಪೆ ಠಾಣೆಯಲ್ಲಿ ಪರಸ್ಪರ ಪಂಚಾಯತಿ ನಡೆಸಿ ಪ್ರಕರಣ ಬಗೆಹರಿಸಲಾಗಿದೆ.ಈ ಸಂದರ್ಭದಲ್ಲಿ ಹಿಂದು ಸಂಘಟನೆಯ ಪ್ರಮುಖರು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ಉಪಸ್ಥಿತರಿದ್ದರು.


Leave a Comment