ಕೊಡ್ಮಾಣ್:ಮಾ.7-8, ಶ್ರೀ ಕೋರ್ದಬ್ಬು ತನ್ನಿಮಾನಿಗ ಮತ್ತು ಸಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ.

Coastal Bulletin
ಕೊಡ್ಮಾಣ್:ಮಾ.7-8, ಶ್ರೀ ಕೋರ್ದಬ್ಬು ತನ್ನಿಮಾನಿಗ ಮತ್ತು ಸಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ.

ಬಂಟ್ವಾಳ :ತಾಲೂಕಿನ ಕೊಡ್ಮಾಣ್ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕೋರ್ದಬ್ಬು, ತನ್ನಿಮಾನಿಗ ಮತ್ತು ಸಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ಮಾ.07 ಹಾಗೂ 08ರಂದು ನಡೆಯಲಿದೆ.

ಮಾ.07ನೇ ಶನಿವಾರ ಬೆಳಿಗ್ಗೆ 9-00ಕ್ಕೆ ಶ್ರೀ ಕೋರ್ದಬ್ಬು ತನ್ನಿಮಾನಿಗ ಮತ್ತು ಸಪರಿವಾರ ದೈವಗಳ ಭಂಡಾರ ಏರುವುದು.ಬಳಿಕ ಬ್ರಹ್ಮಶ್ರೀ ವೇದಮೂರ್ತಿ ಸುಜೀರು ಶ್ರೀ ಗಣೇಶ್ ಭಟ್‌ ರವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮಗಳು, ಗಣಹೋಮ, ಕಲಶಾಭಿಷೇಕ, ಪ್ರಸಾದ ವಿತರಣೆ, ಮದ್ಯಾಹ್ನ ಅನ್ನಪ್ರಸಾದ ಜರುಗಲಿದೆ. ರಾತ್ರಿ10-00ರಿಂದ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವ ನಡೆಯಲಿದೆ.

ಮಾ.08ನೇ ಆದಿತ್ಯವಾರ ಅಪರಾಹ್ನ 3-00ರಿಂದ ಚಾಮುಂಡಿ ಗುಳಿಗ ದೈವಗಳ ಗಗ್ಗರ

ಸೇವೆ, ರಾತ್ರಿ 7-30ರಿಂದ ಪಂಜುರ್ಲಿ ಗುಳಿಗ ದೈವಗಳ ಗಗ್ಗರ ಸೇವೆ, ರಾತ್ರಿ 1-00ರಿಂದ ರಾಹು ಗುಳಿಗ ದೈವದ ಗಗ್ಗರ ಸೇವೆ ನಡೆಯಲಿದೆ.ಮಾ 09ನೇ ಸೋಮವಾರ ಬೆಳಿಗ್ಗೆ ಶ್ರೀ ದೈವಗಳ ಭಂಡಾರ ಇಳಿಸುವುದು ಹಾಗೂ ದೈವಸ್ಥಾನದಿಂದ ಭಂಡಾರ ಸ್ಥಾನಕ್ಕೆ ಶ್ರೀ ಕೋರ್ದಬ್ಬು ತನ್ನಿಮಾನಿಗ ಹಾಗೂ ಸಪರಿವಾರ ದೈವಗಳ ಭಂಡಾರ ಹೊರಡಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment