ಬಂಟ್ವಾಳ :ಪ್ರಧಾನಿ ನರೇಂದ್ರ ಮೋದಿಯವರ ಏಳನೇ ವರ್ಷದ ಆಡಳಿತದ ಸಂಭ್ರಮ ಆಚರಣೆಯನ್ನು ಜನಸೇವಾ ಕಾರ್ಯ ದ ರೂಪದಲ್ಲಿ ಆಚರಿಸುವ ಬಿಜೆಪಿ, ಕ್ಷೇಮ ನಿಧಿ ಯೋಜನೆಯ ಮೊದಲ ಫಲಾನುಭವಿಗಳಿಗೆ ಬಾಂಡ್ ವಿತರಿಸುವ ಕಾರ್ಯ ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ನಲ್ಲಿ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾಯಿ ಮೃತಪಟ್ಟಿರುವ ಇಬ್ಬರು ಹೆಣ್ಮಕ್ಕಳಿಗೆ ಬಾಂಡ್ ವಿತರಿಸಿ ಬಿಜೆಪಿ ಕ್ಷೇಮ ನಿಧಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು.ಬೆಳ್ತಂಗಡಿ ತಾಲೂಕು ವೇಣೂರು ಪೆರಿಂಜೆ ಯ ಅನುಸೂಯ ಅವರು ಹೆರಿಗೆಯಾಗಿ ಮೂರು ತಿಂಗಳಲ್ಲಿ ಮೃತಟ್ಟಿದ್ದು ಅವರ 3ತಿಂಗಳ ಪೂರ್ವಿಕ ಹಾಗೂ 2 ವರ್ಷದ ಅಂಶಿಕ ಈರ್ವರು ಮಕ್ಕಳನ್ನು
ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ನಿವಾಸಿ ರೇವತಿಕೃಷ್ಣಪ್ಪ ಅವರು ಸಾಕುತ್ತಿದ್ದು ಪ್ರಸ್ತುತ ಅವರ ಆರೋಗ್ಯ ಹಾಗೂ ಶಿಕ್ಷಣ ದ ಜವಾಬ್ದಾರಿಯನ್ನು ಬಂಟ್ವಾಳ ಬಿಜೆಪಿ ಹೊತ್ತಿದೆ. ಮಕ್ಕಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ ಎರಡು ಸಾವಿರ ರೂ ಗಳಂತೆ ಹಾಗೂ ಪ್ರಸ್ತುತ ತಲಾ 25. ಸಾವಿರ ರೂಗಳ ಬಾಂಡ್ ನೀಡಿದ್ದು ಅದು ಮಕ್ಕಳಿಗೆ 16 ವರ್ಷ ತುಂಬುವ ವೇಳೆ ರೂ ಒಂದು ಲಕ್ಷ ಸಿಗಲಿದೆ.















