ರಾಜ್ಯದಲ್ಲಿ ಒಂದೊಂದೇ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಗ್ರಾಹಕರು ಹಾಗೂ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಚಿಕನ್ ಹಾಗೂ ಮೊಟ್ಟೆ ದರ ಕೂಡ ಗಣನೀಯ ಏರಿಕೆ ಕಂಡಿದ್ದು, ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ವಿದ್ಯುತ್ ಬಿಲ್, ಪೆಟ್ರೋಲ್, ಡಿಸೇಲ್, ತರಕಾರಿ,ದಿನಸಿ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಲಾಗಿದ್ದು, ಚಿಕನ್ ಮತ್ತು ಮೊಟ್ಟೆ ದರ ಏರಿಕೆಯಾಗಿ ಮಾಂಸ ಪ್ರಿಯರಿಗೂ ಶಾಕ್ ನೀಡಿದೆ.
ಬೇಸಿಗೆಯಲ್ಲಿ ಗರಿಷ್ಠ ತಾಪಮಾನದ
ಪರಿಣಾಮ ಚಿಕನ್ ಮತ್ತು ಮೊಟ್ಟೆ ಉತ್ಪಾದನೆ ಕುಂಠಿತವಾಗಿ ದರ ಹೆಚ್ಚಳವಾಗಿದೆ. ಬಾಯ್ಲರ್ ಚಿಕನ್ ಪ್ರತಿ ಕೆಜಿಗೆ 260 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಮೊಟ್ಟೆ ಒಂದಕ್ಕೆ 6.90 ರೂ 7 ರೂ ದರ ಇದೆ.















