ಕೇರಳ: ಭಾರೀ ಮಳೆ ಸಾವಿನ ಸಂಖ್ಯೆ ಏರಿಕೆ: ಕಾಸರಗೋಡು, ವಯನಾಡು ಸಹಿತ ಐದು ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್

Coastal Bulletin
ಕೇರಳ: ಭಾರೀ ಮಳೆ ಸಾವಿನ ಸಂಖ್ಯೆ ಏರಿಕೆ: ಕಾಸರಗೋಡು, ವಯನಾಡು ಸಹಿತ ಐದು ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್

ಕೇರಳದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಇಂದು ಅಂದರೆ ಶುಕ್ರವಾರ ಕೊಂಚ ಬಿಡುವಿನ ಸಮಯವಾಗಿದೆ. ಸೋಮವಾರದಿಂದ ಎಡಬಿಡದೇ ಸುರಿಯುತ್ತಿದ್ದ ಮಳೆ ಕೆಲವು ಜಿಲ್ಲೆಗಳಲ್ಲಿ ಶುಕ್ರವಾರ ಬಿಡುವು ನೀಡಲಿದೆ, ಆದರೆ ಮಲಪ್ಪುರಂ, ವಯನಾಡು, ಕೋಯಿಕ್ಕೋಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆ ಶುಕ್ರವಾರದಂದು ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಕಣ್ಣೂರು ಜಿಲ್ಲೆಯ ಹಲವು ಕಡೆ ಮಣ್ಣಿನ ಕುಸಿತದ ಪ್ರಕರಣಗಳು ವರದಿಯಾಗಿದೆ.  300 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪಯನೂರು ತಾಲೂಕಿನಲ್ಲೂ 40 ಮನೆಗಳೂ ಹಾನಿಯಾಗಿದೆ. ಹಾಗೂ ವಿವಿಧೆಡೆ ಪಂಪ, ಮಣಿಪಲ, ಮೀನಾಚಿಲ್ ಸಹಿತ ಹಲವು ನದಿಗಳು ಈಗಲೂ ಉಕ್ಕಿ ಹರಿಯುತ್ತಿವೆ. ಕೆಲವು

ಕಡೆ ಈಗಲೂ ನದಿ ತೀರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. 

ಮಳೆಗೆ ಗುರುವಾರ ನಾನಾ ಕಡೆ ಆರು ಮಂದಿ ಮೃತಪಟ್ಟಿದ್ದಾರೆ. ಕೆಲವರು ನೀರಿನಲ್ಲಿ ಕೊಚ್ಚಿಕೊಂಡು ಹೋದರೆ, ಇಬ್ಬರು ವಿದ್ಯುತ್ ಅಘಾತಕ್ಕೆ ಬಲಿಯಾಗಿದ್ದಾರೆ ಕೊಟ್ಟಾಯಂ, ತಿರುವನಂತಪುರಂ, ಕಣ್ಣೂರು, ತಲಚೇರಿ ಜಿಲ್ಲೆಗಳಲ್ಲಿ ಈ ದುರಂತ ದಾಖಲಾಗಿದೆ. 


Leave a Comment