Coastal Bulletin

ಅನೇಕ ತಂಪು ಪಾನೀಯಗಳಲ್ಲಿ ಕಂಡುಬರುವ ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ಘಟಕವು ಕ್ಯಾನ್ಸರ್ ಕಾರಕ ಎಂದು ಘೋಷಿಸಲು ನಿರ್ಧರಿಸಿದೆ. ಅಸ್ಪರ್ಟೇಮ್ ಅಂದರೆ ಸಾಮಾನ್ಯ ಬಳಸುವ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಕೃತಕ ಸಿಹಿಕಾರಕವಾಗಿದೆ. ಇದು ಸಾಮಾನ್ಯ ಸಕ್ಕರೆಗಿಂತ ಸರಿಸುಮಾರು 200 ಪಟ್ಟು ಸಿಹಿಯಾಗಿರುತ್ತದೆ. ಇದನ್ನು ಜುಲೈನಲ್ಲಿ ಕ್ಯಾನ್ಸರ್‌ಕಾರಕ ಎಂದು ಮೊದಲ ಬಾರಿಗೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎಂದು ಪಟ್ಟಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿದೆ.

ಕೋಕಾ-ಕೋಲಾ, ಡಯಟ್ ಸೋಡಾಗಳು, ಮಾರ್ಸ್ ಎಕ್ಸ್ ಟ್ರಾ ಚೂಯಿಂಗ್ ಗಮ್, ಕೆಲವು ಪಾನೀಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಸಿಹಿಕಾರವು ಎರಡು ಆಸ್ಪರ್ಟಿಕ್ ಆಮ್ಲ ಮತ್ತು ಫೆನೈಲಾಲನೈನ್ ಎಂಬ ಅಮೈನೋ

ಆಮ್ಲಗಳಿಂದ ಮಾಡಲ್ಪಟ್ಟಿದೆ.  

ಅಸ್ಪರ್ಟಿಕ್ ಬಳಕೆಯ ಬಗ್ಗೆ ಹಲವಾರು ವರ್ಷಗಳಿಂದ ಅಧ್ಯಯನ ನಡೆಯುತ್ತಿದೆ. ಪ್ರಾನ್ಸ್ ನಲ್ಲಿ ನಡೆದ ಅಧ್ಯಯನದಲ್ಲಿ ಅಸ್ಪರ್ಟಿಕ್ ಮತ್ತು ಇತರ ಕೃತಕ ಸಿಹಿಪದಾರ್ಥಗಳು ಕ್ಯಾನ್ಸರ್ ಉಂಟುಮಾಡುತ್ತದೆ ಎಂದು ತಿಳಿದು ಬಂದಿದೆ. 


Leave a Comment