ಪಶ್ಚಿಮಬಂಗಾಳದ ದಿಘಾದಲ್ಲಿ ಒಂದು ಮೀನು ಹರಾಜಿನಲ್ಲಿ ಸುಮಾರು ಐದು ಲಕ್ಷ ರೂಪಾಯಿ ಬೃಹತ್ ಮೊತ್ತಕ್ಕೆ ಮಾರಾಟವಾಗಿದೆ. ಈ ತೆಲಿಯಾ ಭೋಲಾ ಮೀನು ಕೇಂದ್ರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸುಮಾರು 3ಅಡಿ ಉದ್ದ, ಒಂದು ಅಡಿ ಅಗಲ ಹಾಗೂ 18 ಕೆಜಿ ತೂಕ ಮೀನು ಹರಾಜಿನಲ್ಲಿ 18000 ರೂಪಾಯಿಗೆ ಮಾರಾಟವಾಗಿದೆ. ಇದು ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಗೆ ಮಾರಾಟವಾದ ಮೀನಾಗಿದೆ.
ಒಟ್ಟಾರೆಯಾಗಿ ಈ ದೈತ್ಯ ಮೀನು 4 ಲಕ್ಷ 77 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಈ ತೆಲಿಯಾ ಭೋಲಾ ಮೀನು ದಿಘಾ ಹರಾಜು ಕೇಂದ್ರದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಸ್ಥಳೀಯ ಮೀನುಗಾರರು ಮತ್ತು ಪ್ರವಾಸಿಗರು
ಮೀನನ್ನು ನೋಡಲು ದಿಘಾಗೆ ಬರುತ್ತಿದ್ದಾರೆ.
ಈ ಮೀನನ್ನು ಖರೀದಿಸಲು ತುಂಬಾ ಪೈಪೋಟಿ ನಡೆಯಿತು. ಸಾಕಷ್ಟು ಪೈಪೋಟಯ ನಂತರ ಸಗಟು ವ್ಯಾಪಾರಿ ಪ್ರೇಮಾನಂದ ಬರ್ಮನ್ ಎಂಬುವವರು ಪ್ರತಿ ಕೆಜಿಗೆ 18 ಸಾವಿರ ರೂಪಾಯಿ ನೀಡಿ ಮೀನು ಖರೀದಿಸಿದರು.















