ಸುಮಾರು 30 ವರ್ಷಗಳಿಂದ ನಟನೆಯಿಂದ ಹಿಂದೆ ಉಳಿದಿದ್ದ ಮಹಾಲಕ್ಷ್ಮೀ ಇದೇ ಮೊದಲ ಬಾರಿಗೆ ಕಿರುತೆರೆಗೆ ಕಾಲು ಇಟ್ಟಿದ್ದಾರೆ. ಇವರು ಮೂಲತಃ ತಮಿಳುನಾಡು ಆಗಿದ್ದರೂ. ಕನ್ನಡಲ್ಲೇ ಹೆಚ್ಚು ಅವಕಾಶಗಳು ಸಿಕ್ಕಿದ್ದ ಪರಿಣಾಮ ಯಶಸ್ಸುಗಳು ಸರಮಾಲೆಯೇ ಇವರದ್ದಾಗಿತ್ತು.
ನಟಿ ಮಹಾಲಕ್ಷ್ಮೀ ಅವರು ಇದೇ ಮೊದಲ ಆರಿಗೆ ಕಿರುತೆರೆಯಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆ ಧಾರಾವಾಹಿಯೇ ಕಾವೇರಿ ಕನ್ನಡ ಮೀಡಿಯಂ.
ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ
ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಮಹಾಲಕ್ಷ್ಮೀ ನಟಿಸುತ್ತಿದ್ದು, ಇಡೀ ಮನೆಯ ಮುಖ್ಯಸ್ಥೆ ಅಜ್ಜಿಯ ಪಾತ್ರದಲ್ಲಿ ಮಹಾಲಕ್ಷ್ಮೀ ನಟಿಸುತ್ತಿದ್ದು, ಧಾರಾವಾಹಿಯಲ್ಲಿ ಇವರದ್ದು ಮೋಸ್ಟ್ ಪವರ್‌ಪುಲ್ ಪಾತ್ರವಾಗಿದೆ.
















