ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ

Coastal Bulletin
ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ

ಕೇಂದ್ರ ಸರ್ಕಾರ ಮಹಿಳಾ ಮಣಿಗಳಿಗೆ ಹೊಸ ಯೊಜನೆಗಳನ್ನು ಘೋಷಿಸಿದೆ. ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ದೇಶಾದ್ಯಂತ ಹಳ್ಳಿಗಳಲ್ಲಿ ಎರಡು ಕೋಟಿ “ಲಖ್ಪತಿ ದೀದೀ” ಗಳನ್ನು ಮಾಡಲು ಕೇಂದ್ರ ಸರ್ಕಾರ ಯೋಜನೆಯನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.

ಈ ಯೋಜನೆಯು ಎರಡು ಕೋಟಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉತ್ತೇಜಿಸುವ ಮತ್ತು ತಮ್ಮದೇ ಆದ ಸಣ್ಣ ವ್ಯವಹಾರಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. 

ಹಳ್ಳಿಗಳಲ್ಲಿ ಎರಡು ಕೋಟಿ ಲಕ್ಷ ದೀದಿಗಳನ್ನ ಮಾಡುವುದು ನನ್ನ ಕನಸು, ನೀವು

ಹಳ್ಳಿಗೆ ಹೋದಾಗ, ನೀವು ಬ್ಯಾಂಕ್-ವಾಲಿ ದೀದಿ, ಅಂಗನವಾಡಿ ದೀದಿ ಮತ್ತು ದವಾಯಿ-ವಾಲಿ ದೀದಿಯನ್ನು ಕಾಣಬಹುದು. ಹಳ್ಳಿಗಳಲ್ಲಿ ಎರಡು ಕೋಟಿ ಲಕ್ಷ ದೀದಿಗಳನ್ನು ಮಾಡುವುದು ನನ್ನ ಕನಸು ಎಂದು ಸ್ವಾತಂತ್ರ‍್ಯ  ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. 


Leave a Comment