ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು 15,000 ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರಿಗೆ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆಯಲ್ಲಿ ತರಬೇತಿ ನೀಡುವ ಹೊಸ ಯೋಜನೆಯನ್ನು ಮಂಗಳವಾರ ಘೋಷಿಸಿದ್ದಾರೆ.
ದೇಶವನ್ನು ಮುಂದೆ ಕೊಂಡೊಯ್ಯುವ ಒಂದು ವಿಷಯವೆಂದರೆ ಮಹಿಳಾ ನೇತೃತ್ವದ ಅಭಿವೃದ್ದಿ. ಇಂದು, ಭಾರತವು ನಾಗರಿಕ ವಿಮಾನಯಾನದಲ್ಲಿ ಗರಿಷ್ಠ ಸಂಖ್ಯೆಯ ಪೈಲಟ್ ಗಳನ್ನು ಹೊಂದಿದೆ
ಎಂದು ನಾವು ಹೆಮ್ಮೆಯಿಂದ ಹೇಳಬಹುದು, ಮಹಿಳಾ ವಿಜ್ಞಾನಿಗಳು ಚಂದ್ರಯಾನ ಮಿಷನ್ ಅನ್ನು ಮುನ್ನಡೆಸುತ್ತಿದ್ದಾರೆ. ಈ.20 ದೇಶಗಳು ಮಹಿಳಾ ನೇತೃತ್ವದ ಅಭಿವೃದ್ದಿಯ ಮಹತ್ವವನ್ನು ಗುರುತಿಸುತ್ತಿವೆ ಎಂದರು.















