Coastal Bulletin

ದ.ಆಫ್ರಿಕಾ : 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಮಹಿಳೆ -ಗೊಸಿಯಮೆ ಥಾಮರಾ ಸಿತೋಲ್‌.

ಈ ಮೊದಲು ಮೊರಕ್ಕೋದ ಮಲಿಯಾನ್ ಹಲೀಮಾ ಎಂಬ  ತಾಯಿ ಒಂಭತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಳು. ಈಗ ಆ ದಾಖಲೆಯನ್ನು ಹಿಂದಿಕ್ಕಿದ  ಈ ಯುವತಿ ವಿಶ್ವದ ಮಹಾತಾಯಿ ಎನಿಸಿಕೊಂಡಿದ್ದಾಳೆ.

ಮಾದ್ಯಮಕ್ಕೆ  ಸಂತಸ ಹಂಚಿಕೊಂಡ ಗೊಸಿಯಮೆ ಅವರ ಪತಿ ತೆಬೊಹೊ ಸೊಟೆಟ್ಸಿ ಏಳು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು ಜನಿಸಿವೆ ಎಂದು

ಮಾಹಿತಿ ನೀಡಿದ್ದಾರೆ.ಡೆಲಿವರಿ ಸಮಯಕ್ಕೆ ಏಳು ತಿಂಗಳು ಮತ್ತು ಏಳು ದಿನಗಳ ಗರ್ಭಿಣಿಯಾಗಿದ್ದರು. ನನಗೆ ತುಂಬಾ ಖುಷಿಯಾಗುತ್ತಿದೆ ನಾನು ತುಂಬಾ ಭಾವುಕನಾಗಿದ್ದೇನೆ ಎಂದರು.

10 ಮಕ್ಕಳಿಗೆ ಜನ್ಮ ನೀಡಿದ ಸುದ್ದಿಯನ್ನು ತಿಳಿದ ಗಿನ್ನೆಸ್‌ ವಿಶ್ವ ದಾಖಲೆ ಸಂಸ್ಥೆ ಅಭಿನಂದನೆ ಕೋರಿ ದಾಖಲೆಯೆಂದು ಪರಿಗಣಿಸಲು ಅಗತ್ಯ ಪ್ರಕ್ರಿಯೆ ನಡೆಸಿದೆ ಎಂದು ತಿಳಿಸಿದೆ.



Leave a Comment