Coastal Bulletin

ಬೆಂಗಳೂರು : ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ‌ ಕಾರಣ, ಹಲವು ಕಡೆ ಮನೆಗಳು ಜಲಾವೃತವಾಗಿ ಜನರು ಕಷ್ಟಪಡುತ್ತಿದ್ದಾರೆ. ಹಾಗಾಗಿ ಪ್ರತಿ ವಾರ್ಡ್ ನಲ್ಲೂ ನಿವಾಸಿಗಳ ಕುಂದು ಕೊರತೆ ವಿಭಾಗ ಸ್ಥಾಪಿಸಲು‌ ಹೈಕೋರ್ಟ್ ‌ಸೂಚನೆ ನೀಡಿದೆ.

ಬುಧವಾರ ಹೊರಡಿಸಿದ ಸೂಚನೆಯಲ್ಲಿ ಪ್ರತಿ ವಾರ್ಡ್ ನಲ್ಲಿ‌ ನಿವಾಸಿಗಳ‌ ಕುಂದು ಕೊರತೆ ವಿಭಾಗ ಸ್ಥಾಪಿಸಿವುದು ಕಡ್ಡಾಯವಾಗಿದೆ. ಮತ್ತು ನಿವಾಸಿಗಳ ಕುಂದು ಕೊರತೆಗಳನ್ನು ನಿಭಾಯಿಸಲು ಆಯಾ ವಾರ್ಡಿನ ಎಂಜಿನಿಯರ್ ಗೆ ಸೂಚಿಸಬೇಕು‌ ಎಂದು

ನ್ಯಾಯಾಲಯ ತಿಳಿಸಿದೆ.

ಬೆಂಗಳೂರಿನ ಎಲ್ಲಾ ಕೆರೆಗಳಿಗೆ ಸ್ಲೂಸ್ ಗೇಟ್ ಅಳವಡಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ತಕ್ಷಣಕ್ಕೆ ಪಂಪ್ ನ್ನು ಬಳಸಿ ಜಲಾವೃತ ಪ್ರದೇಶದಿಂದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಬಿಬಿಎಂಪಿ ಗೆ ಮಾಹಿತಿ ನೀಡಿದೆ.

Leave a Comment