Coastal Bulletin

ಉಡುಪಿಯ‌‌ ಸರಕಾರಿ ಆಸ್ಪತ್ರೆಯಲ್ಲಿ ಅಂಕೋಲಾ ಮೂಲದ ಸಿದ್ದಿ ಜನಾಂಗದ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ‌ 27 ವರ್ಷದ ಸುನೀತಾ ಎಂಬ ಮಹಿಳೆ ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಹಿಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು, ತ್ರಿವಳಿ ಮಕ್ಕಳು ಜನಿಸಿವೆ. ಎರಡು ಗಂಡು

, ಒಂದು ಹೆಣ್ಣು ಮಗು ಜನಿಸಿದೆ. ಆದ ಕಾರಣ ಮಹಾತಾಯಿ ಎನಿಸಿಕೊಂಡಿದ್ದಾರೆ.

ಡಾ.ಕವಿಶಾ ಭಟ್, ಡಾ.ರಜನಿ ಕಾರಂತ್ , ಡಾ. ಸೂರ್ಯನಾರಾಯಣ, ಡಾ.ಗಣಪತಿ ಹೆಗಡೆ , ಹಾಗೂ ಡಾ.ಮಹಾದೇವ ಭಟ್ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

Leave a Comment