Coastal Bulletin

ಬಂಟ್ವಾಳ :ಪ್ರಾಥಮಿಕ ಆರೋಗ್ಯ ಕೇಂದ್ರ ಪುದು ಇದರ ಆಶ್ರಯದಲ್ಲಿ ತುಂಬೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಉದ್ಘಾಟನೆಯು ಜೂ 7ರಂದು ನಡೆಯಿತು.

ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಬಿ ತುಂಬೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಇದೀಗ ತುಂಬೆ ಗ್ರಾಮ ಪಂಚಾಯತ್ ನಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳಾದ ಗ್ರಾಮ ಕರಣೀಕರ ಕಛೇರಿ ,ಅಂಚೆ ಕಚೇರಿ ,ಅಂಗನಾವಾಡಿ ಕೇಂದ್ರ ,ಪ್ರಕೃತಿ ಸಂಜೀವಿನಿ ಒಕ್ಕೂಟ, ಡಿಜಿಟಲೀಕರಣ ಗ್ರಂಥಾಲಯ ,ಎನ್ ಆರ್ ಏಲ್ ಎಂ,ಸಂಜೀವಿನಿ ಶೆಡ್,ಶುದ್ದ ಕುಡಿಯುವ ನೀರಿನ ಘಟಕಗಲಿದ್ದು, ಇದರ ಸದುಪಯೋಗ ಗ್ರಾಮದ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.ಮುಂದಿನ ದಿನಗಳಲ್ಲಿ ತುಂಬೆ

ಗ್ರಾಮ ಪಂಚಾಯತ್ ಮಿನಿ ವಿಧಾನ ಸೌಧವಾಗಲೆಂದು ಹಾರೈಸಿದರು.

ಪಂ ಸಿಬ್ಬಂದಿ ಪೂರ್ಣಿಮಾ ಪಾರ್ಥಿಸಿ,ಪ್ರಾಥಾಮಿಕ ಆರೋಗ್ಯ ಸುರಾಕ್ಷಾಧಿಕಾರಿ ಪ್ರೀಯ .ಎ ಸ್ವಾಗತಿಸಿದರು. ಪಂ.ಅಭಿವೃದ್ದಿ ಅಧಿಕಾರಿ ಚಂದ್ರಾವತಿ ಗ್ರಾಮ ಕರಣಿಕರಾದ ಪ್ರಶಾಂತ್ ,ಪಂ. ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ, ಸಮುದಾಯ ಆರೋಗ್ಯ ಅಧಿಕಾರಿ ಸೌಮ್ಯಲತಾ ,ಗ್ರಾ ಪಂ ಸದಸ್ಯರಾದ ಜಯಂತಿ ನಾಗೇಶ ,ಶಶಿಕಲಾ ಮನೋಹರ, ಪಂಚಾಯತ್ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ,ಹಿರಿಯ ನಾಗರಿಕ ವೆಂಕಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Leave a Comment