ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಲಿ ಜ್ವರ ಜಾಸ್ತಿಯಾಗುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 305 ಪ್ರಕರಣಗಳು ಆದರೆ, ಉಡುಪಿಯಲ್ಲಿ 112 ಇಲಿ ಜ್ವರ ಪ್ರಕರಣಗಳು ವರದಿಯಾಗಿವೆ.
ವಿಪರೀತ ಜ್ವರ ಮತ್ತು ಹೊಟ್ಟೆ ನೋವು ಈ ಜ್ವರದ ಲಕ್ಷಣಗಳಾಗಿವೆ. ಇದು ಒಂದು ವೈರಸ್ ಸೋಂಕು ಆಗಿದೆ. ಇಲಿಯ
ದೇಹದ ಯಾವುದೇ ದ್ರವ ಮನುಷ್ಯ ನ ಚರ್ಮಕ್ಕೆ ತಾಗಿದರೆ ಸೋಂಕು ಮನುಷ್ಯನಿಗೆ ಹರಡುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.














