ಹುಬ್ಬಳ್ಳಿ: ನಗರದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿʻ ಸರಳ ವಾಸ್ತು ʼ ಎಂದೇ ಪ್ರಸಿದ್ಧಿ ಪಡೆದ ಸರಳ ವಾಸ್ತು ಗುರುಜೀ ಚಂದ್ರಶೇಖರ್ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.
ಗ್ರಾಹಕರ ಸೋಗಿನಲ್ಲಿ ಬಂದು ಚಾಕುವಿನಿಂದ ಇರಿದು ಸರಳ ವಾಸ್ತು ಗುರುಜೀ ಚಂದ್ರಶೇಖರ್ ಕೊಲೆ ಮಾಡಿದ್ದಾರೆ. ರಿಸೆಪ್ಷನ್‌ನಲ್ಲೇ ದುಷ್ಕರ್ಮಿಗಳು
ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ . ಸ್ಥಳಕ್ಕೆ ಹುಬ್ಬಳ್ಳಿ ಕಮೀಷನರ್ ಲಾಬೂರಾಮ್ ಭೇಟಿಯಾಗಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
















