ಚಲಿಸುತ್ತಿದ್ದ ಬಸ್ ನಿಂದ ರಸ್ತೆಗೆಸೆಯಲ್ಪಟ್ಟು ಅದೇ ಬಸ್ಸಿನ ಕಂಡಕ್ಟರ್ ದುರ್ಮರಣ.

Coastal Bulletin
ಚಲಿಸುತ್ತಿದ್ದ ಬಸ್ ನಿಂದ ರಸ್ತೆಗೆಸೆಯಲ್ಪಟ್ಟು ಅದೇ ಬಸ್ಸಿನ ಕಂಡಕ್ಟರ್ ದುರ್ಮರಣ.

ಮಂಗಳೂರು: ಚಲಿಸುತ್ತಿದ್ದ ಬಸ್ಸಿನ ಫುಟ್​​ ಬೋರ್ಡ್​​​ನಲ್ಲಿ ನಿಂತಿದ್ದ ಬಸ್ ನಿರ್ವಾಹಕ ಟರ್ನಿಂಗ್​​ನಲ್ಲಿ ಆಯ ತಪ್ಪಿ ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿರುವ ಘಟನೆ ಮಂಗಳೂರು ನಗರದ ನಂತೂರು ವೃತ್ತದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಈರಯ್ಯ (23) ಸಾವನ್ನಪ್ಪಿದ ಯುವ ಕಂಡಕ್ಟರ್ ಪ್ರಸ್ತುತ ಸುರತ್ಕಲ್ ತಡಂಬೈಲ್ ನಲ್ಲಿ ವಾಸವಾಗಿದ್ದರು. ಬಸ್ಸಿನ ಎದುರು ಬಾಗಿಲ ಬಳಿ ಈರಯ್ಯ ನಿಂತಿದ್ದರು. ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಬಸ್ ತೆರಳುವ ವೇಳೆ ಘಟನೆ ಸಂಭವಿಸಿದೆ.

ಬಸ್ಸು ಸರ್ಕಲ್ ನಲ್ಲಿ ತಿರುವು ಪಡೆಯುವ ರಭಸಕ್ಕೆ ಕೈ ಜಾರಿ, ಈರಯ್ಯ ರಸ್ತೆಗೆ ಎಸೆಯಲ್ಪಟ್ಟಿದ್ದರು. ತಕ್ಷಣ ಸ್ಥಳದಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸರು ಮತ್ತು

ಸ್ಥಳೀಯರು ಈರಯ್ಯನ್ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು.ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಈರಯ್ಯ ಕೊನೆಯುಸಿರೆಳೆದಿದ್ದಾರೆ. ಕದ್ರಿ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.

Leave a Comment