ಬೆಂಗಳೂರು:ರಾಜ್ಯ ಸರ್ಕಾರ ಕೊರೋನಾ ರೂಪಾಂತರಿ ಒಮೈಕ್ರಾನ್ ನಿಯಂತ್ರಿಸುವ ಸಲುವಾಗಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿಗೊಳಿಸಿದೆ.ಇದರ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ದಿನಾಂಕ 28-12-2021ರಿಂದ ಹೋಟೆಲ್ , ಕ್ಲಬ್, ಪಬ್ ಗಳಲ್ಲಿ ಶೇ 50 ರಷ್ಟು ಜನ ಸೇರಲು ಅವಕಾಶ ನೀಡಿದ್ದಾರೆ.
ಅಲ್ಲದೇ ಸಮಾರಂಭ, ಕಾನ್ಫೆರೆನ್ಸ್, ಮದುವೆ ಸೇರಿದಂತೆ ಇತರೆ ಹೆಚ್ಚು ಜನರು ಸೇರುವಂತ ಕಾರ್ಯಕ್ರಮಗಳಿಗೆ 300 ಜನರಿಗೆ ಮಾತ್ರವೇ ಸೇರೋದಕ್ಕೆ ಅವಕಾಶ ನೀಡಲಾಗಿದೆ.
ನೈಟ್ ಕರ್ಫ್ಯೂ ಸಂದರ್ಭದಲ್ಲಿ ಯಾವುದಕ್ಕೆ ಅವಕಾಶ ಇದೆ ? ಯಾವುದಕ್ಕೆ ಇಲ್ಲ ?
ನೈಟ್ ಕರ್ಪ್ಯೂ ಸಂದರ್ಭದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ.ತುರ್ತು ಸಂದರ್ಭಗಳಿಗೆ ಮಾತ್ರ ಅವಕಾಶ.
ಎಲ್ಲಾ ಕೈಗಾರಿಕೆಗಳಿಗೆ ರಾತ್ರಿ ವೇಳೆಯಲ್ಲಿ ಕಾರ್ಯ ನಿರ್ವಹಿಸೋದಕ್ಕೆ ಅನುಮತಿ ನೀಡಲಾಗಿದೆ. ನೌಕರರು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಅವಕಾಶ
ನೀಡಲಾಗಿದೆ.
ಟೆಲಿಕಾಂ, ಇಂಟರ್ನೆಟ್ ಪ್ರವೈಡರ್ ಓಡಾಟಕ್ಕೂ ಅವಕಾಶ ನೀಡಲಾಗಿದೆ.
ಅಗತ್ಯ ಸೇವೆ ಒದಗಿಸುವಂತ ಸಿಬ್ಬಂದಿಗಳ ಓಡಾಟಕ್ಕೆ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಅನುಮತಿಸಲಾಗಿದೆ.
ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಮಾತ್ರವೇ ಅವಕಾಶ ನೀಡಲಾಗಿದೆ.
ಮೆಡಿಕಲ್ ಶಾಪ್ ಗಳು ನೈಟ್ ಕರ್ಪ್ಯೂ ಸಂದರ್ಭದಲ್ಲಿ ತೆರೆದಿರುತ್ತದೆ.
ಯಾವುದೇ ಕಮರ್ಷಿಯಲ್ ಶಾಪ್ ಗಳನ್ನು ತೆರೆಯೋದಕ್ಕೆ ಅವಕಾಶವಿಲ್ಲ.
ಹೋಂ ಡಿಲಿವರಿ ಪುಡ್ ಸರಬರಾಜಿಗೆ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಅನುಮತಿಸಲಾಗಿದೆ.
ಗೂಡ್ಸ್ ವೆಹಿಕಲ್, ಟ್ರಕ್, ಗೂಡ್ಸ್ ಕ್ಯಾರಿಯರ್, ಖಾಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ರಾತ್ರಿ ಸಂದರ್ಭದಲ್ಲಿ ಬಸ್, ಟ್ರೈನ್, ಮೆಟ್ರೋ ರೈಲ್ ಹಾಗೂ ವಿಮಾನ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
ನೈಟ್ ಕರ್ಪ್ಯೂ ಸಂದರ್ಭದಲ್ಲಿ ಟ್ಯಾಕ್ಸಿ, ಬಸ್, ಆಟೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ.














