Coastal Bulletin

ರಾಜ್ಯದಲ್ಲಿ‌ ಪದೇ ಪದೇ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದು ರಾಜ್ಯದ ಉದ್ದಗಲಕ್ಕೂ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ನಮ್ಮ ಸರ್ಕಾರ ಶ್ರೀ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಮಾದರಿಯಲ್ಲಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ನಮ್ಮ ಸರ್ಕಾರ ಮತ್ತು ಸಂಘಟನೆಯ ವರ್ಚಸ್ಸು ಉಳಿಯಲು ಸಾಧ್ಯ.

ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣವಾದ ದುಷ್ಕರ್ಮಿಗಳ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ.ಜನತೆಗೆ ಬೇಕಾಗಿರುವುದು ನಮ್ಮ ಪೌರುಷದ ಭಾಷಣವಲ್ಲ ಬದಲಾಗಿ ನಾವು ತೆಗೆದುಕೊಳ್ಳುವ ನಿರ್ಧಾಕ್ಷಿಣ್ಯ ಕ್ರಮಗಳು ಜೊತೆಗೆ ನಮ್ಮ ಹಿಂದೂ ಕಾರ್ಯಕರ್ತರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದರೆ ದುಷ್ಕರ್ಮಿಗಳನ್ನು ನಡು‌ ರಸ್ತೆಯಲ್ಲಿಯೇ ಏನ್ಕೌಂಟರ್ ಮಾಡಬೇಕು ಎಂದಿದ್ದಾರೆ ರೇಣುಕಾಚಾರ್ಯ.

ಹಿಂದೂ ಕಾರ್ಯಕರ್ತರ ಹತ್ಯೆಗೆ

ಬಿಜೆಪಿ ಶಾಸಕ,ಮಂತ್ರಿಗಳು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಕೊಲೆಗಡುಕರು ಮುಲಾಜಿಲ್ಲದೆ ಈಥರ ಹತ್ಯೆ ಮಾಡಲು ಮಂತ್ರಿಗಳ ಬೆಂಬಲವಿಲ್ಲದೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಪಕ್ಷದ ಹಲವು ಜವಾಬ್ದಾರಿ ಹೊತ್ತ ನಾಯಕರು ರಾಜೀನಾಮೆ ನೀಡಿದ್ದಾರೆ.

ಮನ್ಮಥ ಶೆಟ್ಟಿ ಪುತ್ತೂರು,ಕಾರ್ತಿಕ್ ಗೌಡ ಚಿಕ್ಕಮುಡ್ನೂರು,ಶ್ರೀನಿವಾಸ ಗೌಡ ಬೆಂಗಳೂರು,ಸಂದೀಪ್ ಹರವಿನಗಂಡಿ,ಶೇಖರ್ ಎಸ್ ಪಾಟೀಲ್ ಕೊಪ್ಪಳ ಮೊದಲಾದ ನಾಯಕರು ರಾಜೀನಾಮೆ ನೀಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment