Coastal Bulletin

ಬಿ ಎಸ್ ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಬಿ ಎಸ್ ಯಡಿಯೂರಪ್ಪ ರವರ 79ನೇ ಜನ್ಮದಿನಾಚರಣೆ ಅಂಗವಾಗಿ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಲಾಯಿತು.

ಪರಿಸರ ಸ್ನೇಹಿ ತಂಡದ ಸಹಯೋಗದೊಂದಿಗೆ ಬೆಳಿಗ್ಗೆ  ಜಲಪುರಿ ಪೊಲೀಸ್ ಕ್ವಾರ್ಟ್ರಸ್ ಗಣಪತಿ ದೇವಸ್ಥಾನ ಆವರಣದಲ್ಲಿ ಮಾಜಿ     ಮಹಾಪೌರರಾದ ಸಂದೇಶ್ ಸ್ವಾಮಿ  ರವರು ಸ್ವಚ್ಚತಾ ಕಾರ್ಯಕ್ಕೆ

ಚಾಲನೆ ನೀಡಿದರು .ನಂತರ 101ಗಣಪತಿ ದೇವಸ್ಥಾನದಲ್ಲಿ ಬಿಎಸ್ ವೈ  ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್  ನೇತೃತ್ವದಲ್ಲಿ  ಸಿಹಿ ವಿತರಿಸಲಾಯಿತು.

Leave a Comment