ಕೋರಮಂಗಲ: ಲೇಡೀಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಸಹಾಯಕ್ಕೆ ಬಾರದ ಗೆಳತಿಯರು!

Coastal Bulletin
ಕೋರಮಂಗಲ: ಲೇಡೀಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಸಹಾಯಕ್ಕೆ ಬಾರದ ಗೆಳತಿಯರು!

ಬೆಂಗಳೂರು: ಕೋರಮಂಗಲದ ಕೃತಿ ಕುಮಾರಿ ಲೈವ್ ಮರ್ಡರ್ ವಿಡಿಯೋ ವೈರಲ್ ಆಗಿದೆ. ಆರೋಪಿ ಅಭಿಷೇಕ್ ಎಂಬಾತ ಕೃತಿ ಕುಮಾರಿಯನ್ನು ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜು.23 ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ರಾತ್ರಿ 11.13 ನಿಮಿಷಕ್ಕೆ ಆರೋಪಿ ಅಭಿಷೇಕ್ ಪಿಜಿಗೆ ಬಂದು ಕೃತಿ ಕುಮಾರಿ ಇದ್ದ ರೂಮ್ ಬಾಗಿಲು ಬಡಿದಿದ್ದಾನೆ. ಈ ವೇಳೆ ಡೋರ್ ಓಪನ್ ಮಾಡುತ್ತಿದ್ದಂತೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೃತಿ ಕುಮಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ, ಬಿಡದೇ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.

ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ಅಭಿಷೇಕ್ ಬಟ್ಟೆ ಬದಲಿಸಿಕೊಂಡು ಪರಾರಿಯಾಗಿದ್ದಾನೆ. ಅಭಿಷೇಕ್ ಭೂಪಾಲ್ ಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. 

ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನ ಎರಡೇ ನಿಮಿಷದಲ್ಲಿ ಕೊಲೆ

ಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಸಹಾಯಹಸ್ತ ಚಾಚಿದ್ರೂ ಪಿಜಿಯಲ್ಲಿದ್ದ ಮೂರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ.  

ರಕ್ತ ಸೋರುತ್ತಿದಾಗ ಕೈ ಚಾಚಿ ಕೃತಿ ಕುಮಾರಿ ಕಾಪಾಡಿ ಅಂತ ಕರೆಯುತ್ತಿದ್ರೂ ಯುವತಿಯರು ಮಾತ್ರ ಹತ್ತಿರ ಕೂಡ ಹೋಗಿಲ್ಲ.  ಕೈಯಲ್ಲಿ ಮೊಬೈಲ್ ಫೋನ್ ನೋಡ್ತಾ ಮೆಟ್ಟಿಲ ಮೇಲಿಂದ ಯುವತಿಯರು ಹೋಗಿದ್ದಾರೆ. ಕರುಣೆಯೇ ಇಲ್ಲದಂತೆ ಪಿಜಿ ಯುವತಿಯರು ವರ್ತಿಸಿದ್ದಾರೆ. ಗಾಬರಿಯಲ್ಲಿ ಏನು ಮಾಡದೇ ಕೃತಿ ಕುಮಾರಿ ಬಳಿಯು ಹೋಗದೇ ಯುವತಿಯರು ನೋಡ್ತಾ ನಿಂತಿದ್ದರು. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Comment