Coastal Bulletin

ಸುಳ್ಯ: ಕ್ಷುಲಕ ಕಾರಣಕ್ಕೆ ನಡೆದ ಹೊಡೆದಾಟದಲ್ಲಿ ತೀವ್ರ ಗಾಯವಾಗಿದ್ದ ಮಸೂದ್ ಇಂದು ಸಾವನ್ನಪ್ಪಿದ್ದಾರೆ.

ಜು.19 ರಂದು ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ ಮೇಲೆ ಕ್ಷುಲಕ ಕಾರಣಕ್ಕಾಗಿ ಎಂಟು ಮಂದಿಯ ನಡುವೆ ಗಲಾಟೆ ನಡೆದಿತ್ತು. ಆ ವೇಳೆಯಲ್ಲಿ ಮಸೂದ್ ಗೆ ಗಂಭೀರ ಗಾಯವಾದ್ದರಿಂದ

ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ  ಹಲ್ಲೆ ನಡೆಸಿದ ಅಭಿಷೇಕ್,ಸುನೀಲ್, ಸುಧೀರ್, ಶಿವ, ರಂಜಿತ್ ,ಸದಾಶಿವ ,ಜಿಮ್ ರಂಜಿತ್, ಭಾಸ್ಕರ ರನ್ನು ಪೋಲಿಸರು  ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Leave a Comment