ಮೈಸೂರು : ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗದವರಿಂದ ರಾಜ್ಯಮಟ್ಟದ ಪೌರಾಣಿಕ ನಾಟಕೋತ್ಸವ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ.

Coastal Bulletin
ಮೈಸೂರು : ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗದವರಿಂದ ರಾಜ್ಯಮಟ್ಟದ ಪೌರಾಣಿಕ ನಾಟಕೋತ್ಸವ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ.

ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗದವರಿಂದ, ರಾಜ್ಯಮಟ್ಟದ ಪೌರಾಣಿಕ ನಾಟಕೋತ್ಸವ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು, ಕುದೇರು ಶಾಖಾ ಮಠದ ಅಧ್ಯಕ್ಷರಾದ ಶ್ರೀ ಗುರುಶಾಂತ ಮಹಾಸ್ವಾಮಿಗಳವರು ಹಾಗೂ ಹೊಸ ಮಠದ ಪರಮ ಪೂಜ್ಯ ಚಿದಾನಂದ ಮಹಾಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಮೈಸೂರಿನ ಆಲನಹಳ್ಳಿ ಕುದೇರು ಶಾಖ ಮಠದ ಆವರಣದಲ್ಲಿ ಮಾಡಲಾಯಿತು .

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೊಸಮಠದ ಚಿದಾನಂದ ಮಹಾಸ್ವಾಮಿಗಳವರು ಕಲೆಯು ಮನುಷ್ಯನ ಸುಜ್ಞಾನದ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಕಲಾ ಪ್ರಪಂಚದಲ್ಲಿ ರಂಗಭೂಮಿ ಅನಾದಿ ಕಾಲದಿಂದಲೂ ತನ್ನದೆಯಾದ ಮಹತ್ವ ಕಾಯಕವನ್ನು ಮಾಡುತ್ತಾ ಬಂದಿದೆ. ಅಲ್ಲದೆ  ನಾಡಿನ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಸಮಾಜದ ಓರೆ- ಕೊರೆಗಳನ್ನು  ಜೀವಂತವಾಗಿ ಎಲ್ಲರ ಮುಂದೆ ಉಣಬಡಿಸಿ, ಅದಕ್ಕೆ ಪರಿಹಾರವನ್ನು ಸಹ  ಜೊತೆಯಲ್ಲಿ ವಿಶ್ಲೇಷಣಾತ್ಮಕವಾಗಿ ಪ್ರಸ್ತುತ ಪಡಿಸಿ, ಜನಮಾನಸದಲ್ಲಿ ಸ್ಥಿರವಾಗಿ ನೆಲೆ ನಿಲ್ಲುವಂತೆ ಮಾಡುವುದೇ ರಂಗಭೂಮಿ ಎಂದು ತಿಳಿಸಿದರು 

ನಂತರ ಮಾತನಾಡಿದ ಕುದೇರು ಮಠದ ಅಧ್ಯಕ್ಷರಾದ ಗುರುಶಾಂತ ಮಹಾಸ್ವಾಮಿಗಳವರು ಪ್ರತಿಭಾವಂತ ಕಲಾವಿದರ ಕಲೆಯನ್ನು ಅನಾವರಣ ಮಾಡುವ ಪ್ರಮುಖ ನೆಲೆಯೇ ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳು. ಮಾತುಗಾರಿಕೆ, ಅಭಿನಯ, ಹಾಡುಗಾರಿಕೆ, ಸಾಹಿತ್ಯ ರಚನೆ, ಸಂಗೀತ ಹಾಗೂ ನಿರ್ದೇಶನ ಇವೆ ಮುಂತಾದ ಕ್ಷೇತ್ರಗಳ ಪ್ರತಿಭೆಯನ್ನು ಒಟ್ಟಾಗಿ ನೋಡಲು ಸಾಧ್ಯವಾದ ಕ್ಷೇತ್ರವೇ ರಂಗಭೂಮಿ ನಾಟಕಗಳು ಇದನ್ನು ಉಳಿಸಿ ಬೆಳೆಸಬೇಕು ಇವೆಲ್ಲರ ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗದ ಅಧ್ಯಕ್ಷರಾದ ಶ್ರೀ ಎಂ ಡಿ ಶಿವರಾಜು ಪ್ರೊಫೆಸರ್ ಸದಾಶಿವಮೂರ್ತಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕಾ ಪು ಸಿದ್ಧವೀರಪ್ಪ, ಮುಖಂಡರಾದ ಗೆಜ್ಜಗಳ್ಳಿ ನಂಜಪ್ಪ, ನಾಟಕೋತ್ಸವದ ಆಯೋಜಕರಾದ ಕೆರೆಯಲ್ಲಿ ದೊರೆಸ್ವಾಮಿ ,ಬಿಜೆಪಿ ನರಸಿಂಹ ರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ಶಿಕ್ಷಕರಾದ  ಬಾಗಳಿ ಮಹೇಶ್ ,  ಸಂಘದ ಪ್ರಧಾನ  ಕಾರ್ಯದರ್ಶಿಗಳಾದ ಗುರುಸ್ವಾಮಿ,  ಮಾದಪ್ಪ ದೇವಪ್ಪಾಜಿ ಮುಂತಾದವರು ಉಪಸ್ಥಿತರಿದ್ದರು.

Leave a Comment