ಬೆಂಗಳೂರು: ಬಿಲ್ಲವ ಅಸೋಸಿಯೇಷನ್ ಬೆಂಗಳೂರು (ರಿ) ಪ್ರಯುಕ್ತ ಬಿಲ್ಲವ ಭವನ, ಹುಳಿಮಾವು ಬೆಂಗಳೂರಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವೂ ಜು. 24ರಂದು ನಡೆಯಲಿದೆ.
ಕರಾವಳಿಯ ವಿಶೇಷ ಮಾಸದ, ಸಾಂಪ್ರದಾಯಿಕ ಆಚರಣೆಯ ವೈಶಿಷ್ಟಮಯ ಕಾರ್ಯಕ್ರಮದ ಜೊತೆಗೆ ರುಚಿಕರವಾದ ಆಟಿಯ ಖಾದ್ಯ ತಿಂಡಿ ತಿನಿಸುಗಳು
ಇರಲಿದೆ. ಅಲ್ಲದೇ, ವಿಶೇಷ ಆಕರ್ಷಣೆಯಾಗಿ ಬಿಲ್ಲವ ಮಹಿಳಾ ಘಟಕದ ಸದಸ್ಯೆಯರಿಂದ ಹಿಡಿಂಬಾ ವಿವಾಹ ಯಕ್ಷಗಾನ ಪ್ರಸಂಗ ಜರಗಲಿದೆ.
















