Coastal Bulletin

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರೋಟರಿ ಕ್ಲಬ್ ಸಿಟಿ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇದೇ ಜು 20ರಂದು ಬುಧವಾರ ಸಂಜೆ 6.30ರಿಂದ ಬಿಸಿ ರೋಡಿನ ರೋಟರಿ ಬಿ ಎ ಸೋಮಯಾಜಿ ಮೆಮೋರಿಯಲ್ ಹಾಲ್ ಸಭಾಂಗಣದಲ್ಲಿ ನಡೆಯಲಿದೆ ನಿಯೋಜಿತ ಅಧ್ಯಕ್ಷೆ ಪಲ್ಲವಿ ಕಾರಂತ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ‌ ತಿಳಿಸಿದರು.

ರೋಟರಿ ಕ್ಲಬ್ಬಿನ ನಿಕಟಪೂರ್ವ ಗವರ್ನರ್ .  ಎಂ ರಂಗನಾಥ ಭಟ್ ಪದಾಧಿಕಾರಿಗಳ ಪದಗ್ರಹಣ ವನ್ನು ನೆರವೇರಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಗವರ್ನರ್ ಎನ್ ಪ್ರಕಾಶ್ ಕಾರಂತ್, ವಲಯ IV ರ ಅಸಿಸ್ಟಂಟ್ ಗವರ್ನರ್ ಇಲ್ಯಸ್ ಸಂಕ್ಟಿಸ್, ವಲಯ ಲೇಫ್ಟಿನೆಂಟ್ ಕೆ ಸತೀಶ್ ಕುಮಾರ್,ರೋ. ಪದ್ಮನಾಭ ರೈ, ಆಶಾಮಣಿ ಡಿ‌. ರೈ, ಗಣೇಶ್ ಶೆಟ್ಟಿ ಈ

ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದರು.

 ಜಿ.ಎಸ್ ಆರ್ ಪದ್ಮನಾಭ ರೈಮತ್ತು ನಿಕಟಪೂರ್ವ ಅಧ್ಯಕ್ಷ ಹಾಗೂ ಪ್ರಸ್ತುತ ವಲಯ ಲೆಫ್ಟಿನೆಂಟ್ ಆಗಿರುವ ಕೆ ಸತೀಶ್ ಕುಮಾರ್ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ರೋಟರಿ ಧ್ಯೇಯೋದ್ದೇಶ ಪಾಲಿಸಿಕೊಂಡು ಕಾರ್ಯನಿರ್ವಹಿಸಿವ ಭರವಸೆ ನೀಡಿದರು.

ಪದ್ಮನಾಭ ರೈ, ಆಶಾಮಣಿ ಡಿ‌. ರೈ, ಜೋತೀಂದ್ರ ಶೆಟ್ಟಿ, ದಯಾನಂದ ಶೆಟ್ಟಿ ಮತ್ತಿತರ ಪ್ರಮುಖರು ಸುದ್ದಿಗೋಷ್ಠಿಯಲ್ಲಿ‌ ಉಪಸ್ಥಿತರಿದ್ದರು.


.

Leave a Comment