ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೋವಿಡ್ ಹೆಚ್ಚಿರುವಂತಹ ಮತ್ತು ಲಸಿಕಾಕರಣದಲ್ಲಿ ಹಿಂದಕ್ಕೆ ಉಳಿದಿರುವಂತ 18 ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕರ ಅಧಿಕಾರಿಗಳು, ತಜ್ಞರು ಕೂಡ ಭಾಗವಹಿಸಿದ್ದರು. ಕೊರೋನಾ ನಿಯಂತ್ರಣ ಹಾಗೂ ಲಸಿಕಾಕರಣದ ತ್ವರಿತಗತಿಯ ಬಗ್ಗೆಯೂ ಚರ್ಚಿಸಿದರು.
ಜಿಲ್ಲೆಯಲ್ಲಿ ಶೀತ, ಕೆಮ್ಮು ಜಾಸ್ತಿ
ಇರುವುದರಿಂದ ಜನರು ಆಸ್ಪತ್ರೆಗೆ ಚಿಕಿತ್ಸೆ ಗೆ ಬರುವಾಗ ಅಲ್ಲಿ ಒಪಿಡಿ ವ್ಯವಸ್ಥೆಯನ್ನು ಬಲಗೊಳಿಸಲು ಮುಖ್ಯಮಂತ್ರಿ ಸೂಚಿಸಿದರು.ಅಲ್ಲದೇ ಲಸಿಕೆ ಹಾಕುವುದರಲ್ಲಿ ನಿರ್ಲಕ್ಷ ಮಾಡಿದರೆ ಅದಕ್ಕೆ ಜಿಲ್ಲಾಧಿಕಾರಿಯೇ ಹೊಣೆ ಎಂದಿದ್ದಾರೆ ಮುಖ್ಯಮಂತ್ರಿ.














