ಬೆಂಗಳೂರು: ಬಿಲ್ಲವ ಅಸೋಸಿಯೇಷನ್ , ಬೆಂಗಳೂರು ಇದರ ವತಿಯಿಂದ ತಾ.29-05-2022ರ ಭಾನುವಾರ 9 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮೇತ ಮಹಿಳಾ ದಿನಾಚರಣೆ 2022 ದೇವಕಿ ಆನಂದ ಸುವರ್ಣ ಕನ್ವೆನ್ಷನ್ ಹಾಲ್, ಬಿಲ್ಲವ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವರಾದ ಮಾನ್ಯ ಶೋಭಾ ಕರಂದ್ಲಾಜೆಯವರು ಉದ್ಘಾಟಿಸಲಿದ್ದಾರೆ. ಶಾಸಕರು, ಬೊಮ್ಮನಹಳ್ಳಿ ಕ್ಷೇತ್ರ ಹಾಗೂ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಸಭೆ, ಬೆಂಗಳೂರಿನ ಸನ್ಮಾನ್ಯ ಶ್ರೀ ಸತೀಶ್ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ
ಅತಿಥಿಗಳಾಗಿ, ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನ ಶ್ರೀಮತಿ ಭಾರತಿ ಶೆಟ್ಟಿ, ನಿರ್ದೇಶಕರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಶ್ರೀಮತಿ ಗೀತಾಂಜಲಿ ಸುವರ್ಣ, ಮಾಜಿ ಬಿಬಿಎಂಪಿ ಸದಸ್ಯರು, ಅರೆಕೆರೆ ಬೆಂಗಳೂರಿನ ಶ್ರೀಮತಿ ಭಾಗ್ಯಲಕ್ಷ್ಮೀ ಮುರಳಿ ಹಾಗೂ ಅಕಾಡೆಮಿಕ್ ಸದಸ್ಯರಾದ ಶ್ರೀಮತಿ ಗೀತಾಂಜಲಿ ದತ್ತಾತ್ರೇಯ ಭಾಗವಹಿಸಲಿದ್ದಾರೆ.














