ದರ್ಶನ್ ಇದೊಂದೇ ಕೊಲೆ ಅಲ್ಲ ಇನ್ನಷ್ಟು ಕೊಲೆ ಮಾಡಿರಬಹುದು,ಉನ್ನತ ತನಿಖೆಗೆ ಬಿಜೆಪಿ ಆಗ್ರಹ.

Coastal Bulletin
ದರ್ಶನ್ ಇದೊಂದೇ ಕೊಲೆ ಅಲ್ಲ ಇನ್ನಷ್ಟು ಕೊಲೆ ಮಾಡಿರಬಹುದು,ಉನ್ನತ ತನಿಖೆಗೆ ಬಿಜೆಪಿ ಆಗ್ರಹ.

ಕೊಡಗು: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದಂತೆ ನಟ ದರ್ಶನ್‌ಗೆ ಅದೇ ಆಗಿದೆ. ದರ್ಶನ್ ಒಬ್ಬ ಅತ್ಯಂತ ದುರಾಹಂಕಾರದ ವ್ಯಕ್ತಿಯಾಗಿದ್ದಾನೆ. ಆತ ಇದೊಂದೇ ಕೊಲೆಯಲ್ಲ, ಇನ್ನಷ್ಟು ಕೊಲೆ ಮಾಡಿರುವ ಅನುಮಾನವಿದೆ. ಬೇರೆಯ ಕೊಲೆಯನ್ನೂ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ತನಿಖೆಯಾಗಲಿ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

ದರ್ಶನ್ ನ ಮ್ಯಾನೇಜರ್ ಕಣ್ಮರೆಯಾಗಿದ್ದಾರೆ. ಆದರೆ ಅವರು 10 ಕೋಟಿ ಮಿಸ್ ಯೂಸ್ ಮಾಡಿದ್ದಾರೆ. ಹೀಗಾಗಿ ಲೆಟರ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ ಎಂದು ದರ್ಶನ್ ಹೇಳಿದ್ದಾರೆ. ಆದರೆ ಇವರೇ ಮ್ಯಾನೇಜರ್ ನನ್ನು ಏನೋ ಮಾಡಿ ಈ ರೀತಿ ಲೆಟರ್ ಇವರೇ ಬರೆದಿಟ್ಟು ಹೀಗೆ ಇವರೆ ಮರ್ಡರ್ ಮಾಡಿರುವ ಸಂಶಯವಿದೆ. ಹೀಗಾಗಿ ದರ್ಶನ್ ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು ಅಪ್ಪಚ್ಚು ರಂಜನ್ ಮಡಿಕೇರಿಯಲ್ಲಿ ಒತ್ತಾಯಿಸಿದ್ದಾರೆ. 

ಕಾಂಗ್ರೆಸ್

ಒಂದು ಭ್ರಷ್ಟ ಸರ್ಕಾರವಾಗಿರುವುದರ ಜೊತೆಗೆ ಇದೊಂದು ಕೊಲೆಗಡುಕ ಸರ್ಕಾರ. ಕಾಂಗ್ರೆಸ್ ಆಡಳಿತದಲ್ಲೇ 477 ಮರ್ಡರ್, 200 ರೇಪ್  ಕೇಸ್ ಆಗಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕುಸಿತವಾಗಿದೆ. ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೋತಿದೆ. ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರೆಯಬಾರದು. ಕಾಂಗ್ರೆಸ್ ನಾಯಕರು ಸ್ವತಃ ತಾವೇ ರಾಜೀನಾಮೆ ಕೊಡಬೇಕು ಎಂದು ಮಡಿಕೇರಿಯಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

Leave a Comment