ಬಂಟ್ವಾಳ: ಬಿಲ್ಲವ ಮಹಿಳಾ ಸಮಿತಿಯಿಂದ ವನಮಹೋತ್ಸವ ಮತ್ತು ಪರಿಸರ ಮಾಹಿತಿ ಕಾರ್ಯಾಗಾರ.

Coastal Bulletin
ಬಂಟ್ವಾಳ: ಬಿಲ್ಲವ ಮಹಿಳಾ ಸಮಿತಿಯಿಂದ ವನಮಹೋತ್ಸವ ಮತ್ತು ಪರಿಸರ ಮಾಹಿತಿ ಕಾರ್ಯಾಗಾರ.

ಬಂಟ್ವಾಳ ತಾಲ್ಲೂಕು ಬಿಲ್ಲವ ಮಹಿಳಾ ಸಮಿತಿ ವತಿಯಿಂದ ಜೂ.17ರಂದು ನಡೆದ ವನಮಹೋತ್ಸವ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ ಶಂಭೂರು ಜಯಂತಿ ಕೆರೆಕೋ ಡಿ ಅವರ ಪರಿಸರದಲ್ಲಿ ನಡೆಯಿತು.

ಬಂಟ್ವಾಳ ತಾಲೂಕು ಬಿಲ್ಲವ ಸಮಿತಿಯ ಅಧ್ಯಕ್ಷರು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ,ನ್ಯಾಯವಾದಿ ಶೈಲಜಾ ರಾಜೇಶ್ ಪರಿಸರ ಕಾಳಜಿ ಯಾಕೆ ಬೇಕು ಮುಂದಿನ ಪೀಳಿಗೆಯ ಮಕ್ಕಳು ಇದನ್ನು ಅರಿತು ತನ್ನ ಹೆತ್ತಮ್ಮ ನನ್ನು ಪ್ರೀತಿಸುವ ಹಾಗೆ ಪ್ರಕೃತಿಯನ್ನು ಪ್ರೀತಿಸಬೇಕು ಮತ್ತು ಪರಿಸರ ವನ್ನು ಉಳಿಸಬೇಕು ಎಂಬ

ಮಾಹಿತಿಯನ್ನು ನೀಡಿದರು.

ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗಿಡ ನೆಡುವ ಮೂಲಕ ಸಂಭ್ರಮಿಸಿದರು.ಮಾಜಿ ಅಧ್ಯಕ್ಷೆ ಮಾಲತಿ ಸಂಜೀವ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸರೋಜಿನಿ ಮಾರಪ್ಪ ,ಜತೆ ಕಾರ್ಯದರ್ಶಿ ರಶ್ಮಿ ಸತೀಶ್,ಕೋಶಾಧಿಕಾರಿ ಸುಜಾತ ದಿನೇಶ್ ,ಶುಭ ಇಂದ್ರೇಶ್,ಜಯಂತಿ ,ದಿವ್ಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Comment