breaking news

Coastal Bulletin

ಮಂಗಳೂರು:ಉಳ್ಳಾಲ ಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರ ಮನೆಯ ವಿದ್ಯುತ್ ಬಿಲ್ ೨ರಿಂದ ೩ಸಾವಿರ ರೂ. ವರೆಗೆ ಬರುತ್ತಿದ್ದು, ಆದರೆ ಇತ್ತೀಚಿಗೆ ಮೀಟರ್ ರೀಡರ್ ಯಡವಟ್ಟಿನಿಂದಾಗಿ ಅವರ ಮನೆ ಬಿಲ್ 7.71 ಲಕ್ಷ ರೂ ಬಿಲ್ ಮೆಸ್ಕಾಂ ನೀಡಿ ಯಡವಟ್ಟು ಮಾಡಿದೆ.

ಬಿಲ್ ನೀಡಲು ಬಂದ ಮೀಟರ್ ರೀಡರ್‌ಗೆ 7.71 ಲಕ್ಷ ರೂ ನೀಡಿದ ಬಗ್ಗೆ ಪ್ರಶ್ನಿಸಿದಾಗ , ಇದೆಲ್ಲ ಗೊತ್ತಿಲ್ಲ ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. 99,338

ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ಬಿಲ್‌ನಲ್ಲಿ  ತೋರಿಸಲಾಗಿದೆ. ವಿಷಯ ತಿಳಿದು ಎಚ್ಚೆತ್ತುಕೊಂಡ ಮೆಸ್ಕಾಂ ಅಧಿಕಾರಿಗಳು ಸದಾಶಿವ ಆಚಾರ್ಯ ಅವರ ಮನೆಗೆ ಹೋಗಿ ಪರಿಷ್ಕೃತ 2833 ರೂ.ಬಿಲ್ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Leave a Comment