ಕಾಂಗ್ರೆಸ್ ನಾಯಕಿ ಹನಿಟ್ರಾಪ್ ಕೇಸ್ನಲ್ಲಿ ಬೆಂಗಳೂರು ಪೊಲೀಸರ ಬಲೆಗೆ!

Coastal Bulletin
ಕಾಂಗ್ರೆಸ್ ನಾಯಕಿ ಹನಿಟ್ರಾಪ್ ಕೇಸ್ನಲ್ಲಿ ಬೆಂಗಳೂರು ಪೊಲೀಸರ ಬಲೆಗೆ!

ಬೆಂಗಳೂರು: ಪ್ರಭಾವಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ವಿದ್ಯಾ ಎಂಬಾಕೆ ಸದ್ಯ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾಳೆ.

ತನ್ನ ಸುಂದರ ಮೈಮಾಟದಿಂದ ಹೈಪ್ರೊಫೈಲ್ ವ್ಯಕ್ತಿಗಳನ್ನು ಖೆಡ್ಡಾಗೆ ಬೀಳಿಸುತ್ತಿದ್ದ ಯುವತಿ ಅರೆಸ್ಟ್‌ ಆಗಿದ್ದು, ಈಕೆ ಕಾಂಗ್ರೆಸ್‌ ಪಕ್ಷದ ಎ ಐ ಸಿ ಸಿ ಸದಸ್ಯೆ ಹಾಗೂ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿಯಾಗಿದ್ದಾಳೆ.

ಗಣ್ಯರಿಗೇ ಗಾಳ ಹಾಕುತ್ತಿದ್ದ ಈಕೆ ಅವರುಗಳ ಜೊತೆ  ಸ್ನೇಹ ಗಳಿಸಿ ಸಂಭಂದ ಬೆಳೆಸುತ್ತಿದ್ದಳು. ಬಳಿಕ ಫೋಟೋ, ವಿಡಿಯೋ ಇದೆ ಎಂದು ಹೆದರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. 

ಇದೇ ರೀತಿ ನಗರದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರ ಜೊತೆ ಸಲುಗೆ ಬೆಳಸಿದ್ದು ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ಕಾಂಟ್ರಾಕ್ಟರ್ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದಾರೆ. ಕೇಸ್ ದಾಖಲಿಸಿದ ಪೊಲೀಸರು  ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Leave a Comment