ಬೆಂಗಳೂರು : ಬಿಎಂಟಿಸಿ ಬಸ್‌ಗಳಲ್ಲಿ ರಾತ್ರಿ ಸಂಚಾರ ನಡೆಸುವ, ಸಾಮಾನ್ಯ ಬಸ್ ಸೇವೆಗಳ ದರಗಳಲ್ಲಿ ವ್ಯತ್ಯಾಸವಿತ್ತು. ಇದರಿಂದಾಗಿ ರಾತ್ರಿಯಿಂದ ಮುಂಜಾನೆ ತನಕ ಬಸ್‌ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಹೆಚ್ಚಿನ ಟಿಕೆಟ್ ದರವನ್ನು ನೀಡಬೇಕಿತ್ತು.ಆದರೆ ಇದೀಗ ಬಿಎಂಟಿಸಿ ಹೊಸ ಆದೇಶ ಹೊರಡಿಸಿದ್ದು ಸಾಮಾನ್ಯ ಪ್ರಯಾಣದ ದರವನ್ನೇ ರಾತ್ರಿ ಸೇವೆಗಳಿಗೂ ನಿಗದಿಪಡಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದಲ್ಲಿ ತಡರಾತ್ರಿ, ಮುಂಜಾನೆ ಸಂಚಾರ ನಡೆಸುವ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ ಪಾಳಿಯಲ್ಲಿಯೂ ಬಸ್‌ಗಳನ್ನು ಓಡಿಸುತ್ತದೆ. ಆದರೆ ಸಾಮಾನ್ಯ ಸೇವೆಗಳ ಬಸ್‌ಗಳಿಗಿಂತ ಇವುಗಳ ಪ್ರಯಾಣ ದರ ಹೆಚ್ಚಿತ್ತು.
ಇದರಿಂದಾಗಿ ಜನರು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಿತ್ತು.ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಈಗ ಸಾಮಾನ್ಯ ಸೇವೆಗಳು, ರಾತ್ರಿ ಸೇವೆಗಳ ಬಸ್‌ಗಳಲ್ಲಿ ಏಕರೂಪದ ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 6ರಿಂದಲೇ ಏಕರೂಪದ ದರವನ್ನು ಪಡೆಯಬೇಕು ಎಂದು ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ.















