ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿ ಪರ ಮೋದಿ - ಅಮಿತ್ ಶಾ ಸೇರಿದಂತೆ ಹೈಕಮಾಂಡ್ ನಾಯಕರ ದಂಡು ರಾಜ್ಯದಲ್ಲಿ ಅಬ್ಬರಿಸುತ್ತಿದ್ದು, ಕಳೆದ ಎರಡು ವಾರಗಳಿಂದ ಚುನಾವಣಾ ಅಖಾಡದಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಬೆಂಗಳೂರು ನಗರದ 28 ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಕ್ಷೇತ್ರಗಳನ್ನು ಗುರಿಯಾಗಿರಿಸಿ ಮೋದಿ ಎರಡು ದಿನಗಳ ಭರ್ಜರಿ ರೋಡ್ ಶೋ ನಡೆಸಿ ಇಂದಿಗೆ ಟ್ರಿನಿಟಿ ಸರ್ಕಲ್ ಬಳಿ
ಅಂತ್ಯಗೊಂಡಿತು.
ಬೆಂಗಳೂರು ರೋಡ್ ಶೋ ಬಹುತೇಕ ಯಶಸ್ವಿಯಾಗಿದ್ದು ಲಕ್ಷಾಂತರ ಬಿಜೆಪಿ ಕಾರ್ಯಕರ್ತರು,ಮೋದಿ ಅಭಿಮಾನಿಗಳು ಸೇರಿದ್ದು ಚುನಾವಣಾ ಫಲಿತಾಂಶದಲ್ಲಿ ಭಾರೀ ನಿರೀಕ್ಷೆ ಇಡಲಾಗಿದೆ. ಎರಡು ದಿನಗಳಲ್ಲಿ ಮೋದಿ ಬೆಂಗಳೂರನ್ನು ಕಬ್ಜಾ ಮಾಡಿರುವುದಂತು ಸತ್ಯ.















