Coastal Bulletin

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಎಡನೇ ಪಟ್ಟಿ ಪ್ರಕಟವಾಗಿದೆ. ಎಐಸಿಸಿ 42 ಕ್ಷೇತ್ರಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷ ಅಂದ್ರೆ ಎಡರನೇ ಪಟ್ಟಿಯಲ್ಲಿ ವಲಸಿಗರಿಗೆ ಕಾಂಗ್ರೆಸ್ ಹೈಕಮಾಮಡ್​ ಮಣೆ ಹಾಕಿದೆ. ಆದ್ರೆ, ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ,ಇದರ ಜೊತೆಗೆ ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ

1. ನಿಪ್ಪಾಣಿ - ಕಾಕಾಸಾಹೇಬ್‌ ಪಾಟೀಲ್

2. ಗೋಕಾಕ್‌ - ಮಹಂತೇಶ್‌ ಕಡಾಡಿ

3. ಕಿತ್ತೂರು - ಬಾಬಾಸಾಹೇಬ್‌ ಬಿ.ಪಾಟೀಲ್

4. ಸೌದತ್ತಿ ಯಲ್ಲಮ್ಮ- ವಿಶ್ವಾಸ್‌ ವಸಂತ್‌ ವೈದ್ಯ

5. ಮುಧೋಳ (ಎಸ್‌ಸಿ)- ರಾಮಪ್ಪ ಬಾಲಪ್ಪ ತಿಮ್ಮಾಪುರ

6. ಬೀಳಗಿ- ಜೆ.ಟಿ. ಪಾಟೀಲ್

7. ಬಾದಾಮಿ- ಭೀಮಸೇನ್‌ ಬಿ. ಚಿಮ್ಮನಕಟ್ಟಿ

8. ಬಾಗಲಕೋಟೆ - ಹುಲ್ಲಪ್ಪ ವೈ. ಮೇಟಿ

9. ಬಿಜಾಪುರ ನಗರ- ಅಬ್ದುಲ್‌ ಹಮೀದ್‌ ಖಾಜಾಸಾಹೇಬ್ ಮುಶ್ರಿಫ್

10. ನಾಗಠಾಣ (ಎಸ್‌ಸಿ)- ವಿಠ್ಠಲ ಕಟಕದೊಂಡ

11. ಅಫ್ಜಲ್‌ಪುರ - ಎಂ.ವೈ. ಪಾಟೀಲ್

12. ಯಾದಗಿರಿ- ಚನ್ನರೆಡ್ಡಿ ಪಾಟೀಲ್‌ ತುಣ್ಣೂರ್

13. ಗುರಮಿಠ್‌ಕಲ್‌- ಬಾಬುರಾವ್‌ ಚಿಂಚನಸೂರ

14. ಗುಲ್ಬರ್ಗ ದಕ್ಷಿಣ - ಅಲ್ಲಮಪ್ರಭು ಪಾಟೀಲ್

15. ಬಸವಕಲ್ಯಾಣ - ವಿಜಯ್ ಧರಂ ಸಿಂಗ್

16. ಗಂಗಾವತಿ - ಇಕ್ಬಾಲ್ ಅನ್ಸಾರಿ

17. ನರಗುಂದ - ಬಿಆರ್ ಯಾವಗಲ್

18. ಧಾರವಾಡ - ವಿನಯ್ ಕುಲಕರ್ಣಿ

19. ಕಲಘಟಗಿ-ಸಂತೋಷ್ ಎಸ್. ಲಾಡ್

20. ಶಿರಸಿ - ಭೀಮಣ್ಣ ನಾಯ್ಕ್

21. ಯಲ್ಲಾಪುರ - ವಿ.ಎಸ್.ಪಾಟೀಲ್

22. ಕೂಡ್ಲಿಗಿ (ಎಸ್‌ಟಿ) - ಡಾ ಶ್ರೀನಿವಾಸ್ ಎಂ.ಟಿ

23. ಮೊಳಕಾಲ್ಮೂರು (ಎಸ್‌ಟಿ)-ಎನ್.ವೈ. ಗೋಪಾಲಕೃಷ್ಣ

24. ಚಿತ್ರದುರ್ಗ - ಕೆ.ಸಿ.ವೀರೇಂದ್ರ (ಪಪ್ಪಿ)

25. ಹೊಳಲ್ಕೆರೆ (ಎಸ್‌ಸಿ)- ಆಂಜನೇಯ ಎಚ್

26. ಚೆನ್ನಗಿರಿ - ಬಸವರಾಜು ವಿ ಶಿವಗಂಗ

27. ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್

28. ಉಡುಪಿ - ಪ್ರಸಾದ್‌ ರಾಜ್ ಕಾಂಚನ್

29. ಕಡೂರು - ಆನಂದ್ ಕೆ.ಎಸ್

30. ತುಮಕೂರು ನಗರ - ಇಕ್ಬಾಲ್ ಅಹ್ಮದ್

31. ಗುಬ್ಬಿ - ಎಸ್.ಆರ್.ಶ್ರೀನಿವಾಸ್

32. ಯಲಹಂಕ - ಕೇಶವ

ರಾಜಣ್ಣ ಬಿ

33. ಯಶವಂತಪುರ - ಸ್.ಬೈರಾಜ್ ಗೌಡ

34. ಮಹಾಲಕ್ಷ್ಮಿ ಲೇಔಟ್ - ಕೇಶವಮೂರ್ತಿ

35. ಪದ್ಮನಾಭ ನಗರ- ವಿ.ರಘುನಾಥ ನಾಯ್ಡು

36. ಮೇಲುಕೋಟೆ - ಸರ್ವೋದಯ ಪಾರ್ಟಿಯ ದರ್ಷನ್ ಪುಟ್ಟಣ್ಣಯ್ಯಗೆ ಬೆಂಬಲ

37. ಮಂಡ್ಯ - ಪಿ ರವಿಕುಮಾರ್

38. ಕೃಷ್ಣರಾಜಪೇಟೆ- ಬಿ.ಎಲ್.ದೇವರಾಜ್

39. ಬೇಲೂರು-ಬಿ.ಶಿವರಾಮ್

40. ಮಡಿಕೇರಿ- ಡಾ.ಮಂತರ್ ಗೌಡ

41. ಚಾಮುಂಡೇಶ್ವರಿ-ಸಿದ್ದೇಗೌಡ

42. ಕೊಳ್ಳೇಗಾಲ (ಎಸ್‌ಸಿ) - ಎ.ಆರ್.ಕೃಷ್ಣಮೂರ್ತಿ

ಕಳೆದ ಮಾರ್ಚ್​ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ.

ಇತ್ತೀಚೆಗೆ ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ ಕೆಲವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್​ ಘೋಷಣೆ ಮಾಡಲಾಗಿದೆ. ಮುಖ್ಯವಾಗಿ ಇತ್ತೀಚೆಗಷ್ಟೇ ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್​.ವೈ ಗೋಪಾಲಕೃಷ್ಣ ಅವರಿಗೆ ಮೊಣಕಾಲ್ಮೂರು ಕ್ಷೇತ್ರದ ಟಿಕೆಟ್​ ನೀಡಲಾಗಿದೆ. ಇನ್ನು ಸಿದ್ದರಾಮಯ್ಯನವರ ಆಪ್ತ ಹೆಚ್​ ಆಂಜನೇಯ್ಯ ಅವರಿಗೆ ಹೊಳಲ್ಕೇರೆ ಟಿಕೆಟ್​​ ಸಿಕ್ಕಿದೆ.

ಕಾಂಗ್ರೆಸ್ ನ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಹಲವು ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ.ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ವಿ ಎಸ್ ದತ್ತಾ ಅವರಿಗೆ ಟಿಕೆಟ್ ನೀಡಿಲ್ಲ.ಗೋಕಾಕ್ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅಶೋಕ್ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿದ್ದಾರೆ.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮಿ ಇಮಾನುದಾರ್ ಹಾಗೂ ತಮ್ಮ ಕುಟುಂಬ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದೆ.

Leave a Comment