Coastal Bulletin

ಬಂಟ್ವಾಳ:ಬಿ ಸಿ ರೋಡು ನಾರಾಯಣ ಗುರು ವೃತ್ತದ ಬಳಿ ಗೂಡಿನಬಳಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಪರಿಸರವಿಡೀ ಬೆಂಕಿ ಜ್ವಾಲೆ ಹಾಗೂ ಭಾರೀ ಪ್ರಮಾಣದ ಹೊಗೆ ಆವರಿಸಿಕೊಂಡು ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಗುರುವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.

ಬಿಸಿರೋಡು ಮುಖ್ಯ ಪೇಟೆ ಹಾಗೂ ರೈಲ್ವೆ ನಿಲ್ದಾಣದ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಬೆಂಕಿ ಬಿದ್ದ ಕಾರಣ ಕೆಲ ಹೊತ್ತು ಆತಂಕದ ವಾತವರಣ ನಿರ್ಮಾಣ ವಾಗಿತ್ತು. ಬಂಟ್ವಾಳ ಅಗ್ನಿಶಾಮಕ ದಳ

ಸ್ಥಳಕ್ಕೆ ಆಗಮಿಸಿ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.

ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಜನರನ್ನು ಚದುರಿಸಲು ಬಂಟ್ವಾಳ ನಗರ ಠಾಣಾ ಎಸ್ ಐ ರಾಮಕೃಷ್ಣ ಮತ್ತು ತಂಡದವರು ಹರಸಾಹಸ ಪಟ್ಟರು.

Leave a Comment