ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣ ದಲ್ಲಿ ಐವರ ಬಂಧನ - ಸಿಎಂ. ಚುನಾವಣಾ ಸಂದರ್ಭದಲ್ಲಿ ಮಾತ್ರ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಆಕ್ಟೀವ್ - ಸಿದ್ದರಾಮಯ್ಯ ಗರಂ.

Coastal Bulletin
ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣ ದಲ್ಲಿ ಐವರ ಬಂಧನ - ಸಿಎಂ. ಚುನಾವಣಾ ಸಂದರ್ಭದಲ್ಲಿ ಮಾತ್ರ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಆಕ್ಟೀವ್ - ಸಿದ್ದರಾಮಯ್ಯ ಗರಂ.

ಬನವಾಸಿ (ಶಿರಸಿ): ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಐವರ ಬಂಧನವಾಗಿದೆ ಎಂಬ ಮಾಹಿತಿ ಇದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ, ಯಾರು, ಏನು ಎಂಬ ಬಗ್ಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕದಂಬೋತ್ಸವಕ್ಕೆ ಚಾಲನೆ ನೀಡಲು ಸಂಜೆ ಬನವಾಸಿಗೆ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸಿಸಿಬಿ, ಪೊಲೀಸರು ಹಾಗೂ ಎನ್‌ಐಎ ತನಿಖೆ ಮಾಡುತ್ತಿದ್ದಾರೆ. ತನಿಖೆ ಚುರುಕಾಗಿ ನಡೆಯುತ್ತಿದೆ. ಐವರ ಬಂಧನವಾಗಿದೆ ಎಂದು ತಿಳಿದು ಬಂದಿದೆ. ಕೆಲವು ಸುಳಿವುಗಳು ಕೂಡಾ ಸಿಕ್ಕಿವೆ, ಯಾರನ್ನು ಬಂಧಿಸಲಾಗಿದೆ ಎಂದು ಮಾಹಿತಿ ಇಲ್ಲ ಎಂದೂ ಸಹ ಮುಖ್ಯಮಂತ್ರಿಗಳು ಹೇಳಿದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ ಕುರಿತು ಪ್ರಶ್ನಿಸಿದಾಗ, ಬಿಜೆಪಿ ಕಾಲದಲ್ಲಿ ಮಂಡ್ಯದಲ್ಲಿ ಅವರ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಹಾಗಿದ್ದರೆ ಅವರನ್ನು ಏಕೆ ಬಂಧಿಸಿರಲಿಲ್ಲ. ಆ ಪ್ರಕರಣ ವಜಾ ಮಾಡಿದ್ದರು. ಅಂದಾಗ ಯಾರು ದೇಶದ್ರೋಹಿಗಳು ಎಂದು ಪ್ರಶ್ನಿಸಿದ ಅವರು, ನಾವು ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದೇವೆ. ಪಾಕಿಸ್ತಾನ್ ಜಿಂದಾಬಾದ್ ಎಂದ‌ ಪ್ರಕರಣದ ಆರೋಪಿಗಳನ್ನೂ ಬಂಧಿಸಿದ್ದೇವೆ ಎಂದು ಉತ್ತರಿಸಿದರು.

ಅನಂತ್ ಕುಮಾರ್ ವಿರುದ್ಧ ಸಿಎಂ ಕಿಡಿ.

ಅನಂತಕುಮಾರ ಹೆಗಡೆಗೆ ಸಂಸ್ಕೃತಿ ಇಲ್ಲ. ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವವರು ಈ ರೀತಿ ಮಾತನಾಡಲ್ಲ.

ಜನವಿರೋಧಿಯಾದವರು ಮಾತ್ರ ಭಾವನಾತ್ಮಕವಾಗಿ ಮಾತನಾಡುತ್ತಾರೆ. ನನ್ನನ್ನು ಟಾರ್ಗೆಟ್ ಮಾಡಿದರೆ ಮಾತ್ರ ಅದು ಹಿಂದೂತ್ವ ಆಗುವುದು ಎಂದು ಮಾಡುತ್ತಿದ್ದಾರೆ. ಅವರು ಹಿಂದೂತ್ವವಾದಿಗಳು. ಮನುವಾದಿಗಳು ಎಂದು ದಾಳಿ ನಡೆಸಿದರು. ಅನಂತಕುಮಾರ ಹೆಗಡೆ ಕೇವಲ ಎರಡ್ಮೂರು ತಿಂಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಅದಕ್ಕಿಂತ ಮುನ್ನ ಎಲ್ಲಿಗೆ ಹೋಗಿದ್ದರು. ಅವರಿಗೆ ಆರೋಗ್ಯ ಸರಿ ಇರಲಿಲ್ಲ ಎಂದಾದರೆ ಸಂಸದ ಸ್ಥಾನಕ್ಕೆ ರಾಜೀನಾಮ ಕೊಡಬೇಕಿತ್ತು. ಲೋಕಸಭಾ ಸದಸ್ಯರಾಗಿ ಅವರು ಕ್ರಿಯಾಶೀಲರಾಗಿ ಇಲ್ಲ. ನನಗೋಸ್ಕರ ಆ್ಯಕ್ಟೀವ್ ಆಗಿದ್ದಾರಾ. ಜನರ ಕೆಲಸ ಮಾಡದವರು. ಆ್ಯಕ್ಟೀವ್ ಇಲ್ಲದವರನ್ನು ಜನರು ಆಯ್ಕೆ ಮಾಡಿದಾರಲ್ವಾ ಎಂದು ವ್ಯಂಗ್ಯವಾಡಿದರು.

Leave a Comment