Coastal Bulletin

ಹಾವೇರಿ :ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಾತನಾಡಿದ ಕಟೀಲ್, ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಹ್ವಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರೀಯಿಸಿದ ಅವರು, ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಯಾರಾದ್ರೂ ರಕ್ಷಿಸಿ ಅಂತಾ ಕೈಚಾಚಿ ಕೇಳ್ತಾ ಇದ್ದಾರೆ‌ ಎಂದರು.ಇವತ್ತು ಕಾಂಗ್ರೆಸ್ ಮುಳುಗುವ ಹಡಗು ಹತ್ತೋ ಜನರು ಇಲ್ಲ. ಹಾಗಾಗಿ ಯಾವ ಪಾರ್ಟಿಯಲ್ಲಿದ್ರೂ ಒಂದ್ಸಾರಿ ಬಂದು ನಮ್ಮನ್ನ ರಕ್ಷಣೆ ಮಾಡಿ ಅಂತಾ ಬೇಡ್ತಾ ಇದ್ದಾರೆ ಎಂದರು.

ಸಚಿವ ಯೋಗೇಶ್ವರ ಅಂಬಾರಿ ಹೋರೋ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಯಾವ ರೀತಿಯ ಭಾವನೆಯಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ.

ಅದರ ವಿವರಣೆಯನ್ನು ಕೇಳ್ತೇನೆ. ನಮ್ಮ ಸರಕಾರ, ನಮ್ಮ ಮಂತ್ರಿಗಳು, ಶಾಸಕರು ಮಾದ್ಯಮಗಳ ಮುಂದೆ ಮಾತನಾಡಬಾರದು. ಅನಗತ್ಯವಾಗಿರೋ ವಿಚಾರಗಳನ್ನು ಮಾತನಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಎಚ್ಚರಿಸಿದರು.


ನಾಯಕತ್ವ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಿಜೆಪಿಯಲ್ಲಿ ಇಲ್ಲ.

ನಾಯಕತ್ವದ ಚರ್ಚೆಯನ್ನ ಹಾದಿ ಬೀದಿಯಲ್ಲಿ ಮಾಡುವಂಥದ್ದಲ್ಲ. ಶಾಸಕಾಂಗ ಸಭೆಗಳನ್ನ ಕರೆಯುತ್ತದೆ. ಶಾಸಕಾಂಗ ಸಭೆಗಳಲ್ಲಿ ಮಾತನಾಡಬೇಕು. ದಾರಿಯಲ್ಲಿ ಮಾತನಾಡಿದರೆ ನಾಯಕತ್ವ ಬದಲಾವಣೆ ಆಗೋದಿಲ್ಲ.

ಯಾವುದೇ ಗೊಂದಲಗಳು ಬೇಡ, ಯಾವುದೇ ರೀತಿಯ ನಾಯಕತ್ವ ಬದಲಾವಣೆ ನಮ್ಮ ಪಕ್ಷದಲ್ಲಿ ಇಲ್ಲ

ಎಂದು ಆಗಸ್ಟ್ ವೇಳೆಗೆ ಸಿಎಂ ಬದಲಾಗ್ತಾರೆ ಅನ್ನೋ ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ನಳೀನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದರು.


ಸಿಎಂ ನಿವಾಸದ ಹಿಂದೆ ನೂರಾರು ಕೋಟಿ ರುಪಾಯಿ ವ್ಯವಹಾರ ನಡೆಯುತ್ತೆ ಶಾಸಕ ಯತ್ನಾಳ ಹೇಳಿಕೆಗಳಿಗೆ ನಾನು ಹೆಚ್ಚು ಮಹತ್ವ ಕೊಡೋದಿಲ್ಲ ಎಂದರು.


ಪ್ರಧಾನಿ ದುರಂಹಕಾರಿ ಎಂಬ ಕಾಂಗ್ರೆಸ್​ ನಾ ಹೇಳಿಕೆ ವಿಚಾರವನ್ನು ತಿರಸ್ಕರಿಸಿದ ಅವರು ಪ್ರಧಾನ ಮಂತ್ರಿಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ತೆಗೆದುಕೊಳ್ಳಬೇಕು. ಅವರದ್ದೇ ಪಾರ್ಟಿಯ ಸಿದ್ದರಾಮಯ್ಯನವರು ಏನು ಅನ್ನೋದನ್ನ ಅವರೇ ಹೇಳಬೇಕು. ಕಾಂಗ್ರೆಸ್​ನವರ ದುರಹಂಕಾರದಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ಯೋಗ್ಯತೆಯನ್ನೂ ಜನರು ಅವರಿಗೆ ಕೊಟ್ಟಿಲ್ಲ ಎಂದು ಹೇಳಿದರು.

Leave a Comment