ಲೋಕಸಭಾ ಚುನಾವಣಾ ಫಲಿತಾಂಶ - ಕರ್ನಾಟಕದಲ್ಲಿ ಬಿಜೆಪಿ 17,ಕಾಂಗ್ರೆಸ್ 09, ಜೆಡಿಎಸ್ 02 ಕ್ಷೇತ್ರಗಳಲ್ಲಿ ಜಯಭೇರಿ.

Coastal Bulletin
ಲೋಕಸಭಾ ಚುನಾವಣಾ ಫಲಿತಾಂಶ - ಕರ್ನಾಟಕದಲ್ಲಿ ಬಿಜೆಪಿ 17,ಕಾಂಗ್ರೆಸ್ 09, ಜೆಡಿಎಸ್ 02 ಕ್ಷೇತ್ರಗಳಲ್ಲಿ ಜಯಭೇರಿ.

ಬಹು ಯಶಸ್ವಿಯೊಂದಿಗೆ 18ನೇ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದೆ. ಲೋಕಸಭಾ ಚುನಾವಣಾ 2024 ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್​ 09 ಮತ್ತಯ ಜೆಡಿಎಸ್​ 02 ಸ್ಥಾನ ಪಡೆದುಕೊಂಡಿದೆ. ಸುಮಾರು 15 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್​​ ಗೆ ನಿರಾಶೆಯಾಗಿದೆ. ಇನ್ನು ಬಿಜೆಪಿ ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದು, ಈ ಬಾರಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸದಲ್ಲಿತ್ತು. ಆದ್ರೆ ಬಿಜೆಪಿ 25ರಿಂದ 17ಕ್ಕೆ ಕುಸಿದಿದೆ. ಇನ್ನು ಬಿಜೆಪಿಯ ಮಿತ್ರ ಪಕ್ಷ ಸ್ಪರ್ಧೆ ಮಾಡಿದ್ದ ಮೂರಲ್ಲಿ ಎರಡು ಸ್ಥಾನ ಗೆದ್ದು ಗಮನಾರ್ಹ ಸಾಧನೆ ಮಾಡಿದೆ.

ಕರ್ನಾಟಕ ಲೋಕಸಭೆ ಚುನಾವಣೆ ಫಲಿತಾಂಶ 2024ರ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.

ಬಾಗಲಕೋಟೆ ಕ್ಷೇತ್ರ: ಪಿಸಿ. ಗದ್ದಿಗೌಡರ್​-ಬಿಜೆಪಿ​

ಬೆಂಗಳೂರು ಕೇಂದ್ರ ಕ್ಷೇತ್ರ: ಪಿ.ಸಿ.ಮೋಹನ್- ಬಿಜೆಪಿ

ಬೆಂಗಳೂರು ಉತ್ತರ ಕ್ಷೇತ್ರ: ಶೋಭಾ ಕರಂದ್ಲಾಜೆ-ಬಿಜೆಪಿ

ಬೆಂಗಳೂರು ದಕ್ಷಿಣ ಕ್ಷೇತ್ರ: ತೇಜಸ್ವಿ ಸೂರ್ಯ- ಬಿಜೆಪಿ

ಬೆಂಗಳೂರು ಗ್ರಾಮಾಂತರ: ಡಾ. ಮಂಜುನಾಥ್​-ಬಿಜೆಪಿ

ಬೆಳಗಾವಿ ಕ್ಷೇತ್ರ: ಜಗದೀಶ್ ಶೆಟ್ಟರ್- ಬಿಜೆಪಿ

ಬಳ್ಳಾರಿ ಕ್ಷೇತ್ರ: ಇ. ತುಕಾರಾಂ- ಕಾಂಗ್ರೆಸ್​

ಬೀದರ್ ಕ್ಷೇತ್ರ: ಸಾಗರ್ ಈಶ್ವರ ಖಂಡ್ರೆ- ಕಾಂಗ್ರೆಸ್​

ಬಿಜಾಪುರ ಕ್ಷೇತ್ರ: ರಮೇಶ್​ ಜಿಗಜಿಣಗಿ- ಬಿಜೆಪಿ

ಚಾಮರಾಜನಗರ ಕ್ಷೇತ್ರ: ಸುನಿಲ್ ಬೋಸ್- ಕಾಂಗ್ರೆಸ್​

ಚಿಕ್ಕಬಳ್ಳಾಪುರ ಕ್ಷೇತ್ರ: ಕೆ.ಸುಧಾಕರ್- ಬಿಜೆಪಿ

ಚಿಕ್ಕೋಡಿ ಕ್ಷೇತ್ರ: ಪ್ರಿಯಾಂಕಾ ಸತೀಶ್ ಜಾರಕಿಹೊಳಿ- ಕಾಂಗ್ರೆಸ್​

ಚಿತ್ರದುರ್ಗ ಕ್ಷೇತ್ರ: ಗೋವಿಂದ ಕಾರಜೋಳ- ಬಿಜೆಪಿ

ದಕ್ಷಿಣ ಕನ್ನಡ ಕ್ಷೇತ್ರ:

ಬ್ರಿಜೇಶ್ ಚೌಟಾ- ಬಿಜೆಪಿ

ದಾವಣಗೆರೆ ಕ್ಷೇತ್ರ: ಪ್ರಭಾ ಮಲ್ಲಿಕಾರ್ಜುನ್- ಕಾಂಗ್ರೆಸ್​

ಧಾರವಾಡ ಕ್ಷೇತ್ರ: ಪ್ರಲ್ಹಾದ್​ ಜೋಶಿ- ಬಿಜೆಪಿ

ಕಲಬುರಗಿ ಕ್ಷೇತ್ರ: ರಾಧಾಕೃಷ್ಣ-ಕಾಂಗ್ರೆಸ್​

ಹಾವೇರಿ ಕ್ಷೇತ್ರ: ಬಸವರಾಜ ಬೊಮ್ಮಾಯಿ- ಬಿಜೆಪಿ

ಕೋಲಾರ ಕ್ಷೇತ್ರ: ಎಂ ಮಲ್ಲೇಶ್ ಬಾಬು- ಜೆಡಿಎಸ್​

ಕೊಪ್ಪಳ ಕ್ಷೇತ್ರ: ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್- ಕಾಂಗ್ರೆಸ್​

ಮೈಸೂರು ಕ್ಷೇತ್ರ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​- ಬಿಜೆಪಿ

ರಾಯಚೂರು ಕ್ಷೇತ್ರ: ಜಿ ಕುಮಾರ್ ನಾಯಕ್​- ಕಾಂಗ್ರೆಸ್​

ಶಿವಮೊಗ್ಗ ಕ್ಷೇತ್ರ: ಬಿ.ವೈ ರಾಘವೇಂದ್ರ-ಬಿಜೆಪಿ

ತುಮಕೂರು ಕ್ಷೇತ್ರ: ವಿ.ಸೋಮಣ್ಣ- ಬಿಜೆಪಿ

ಉಡುಪಿ ಚಿಕ್ಕಮಗಳೂರು ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿ- ಬಿಜೆಪಿ

ಉತ್ತರ ಕನ್ನಡ ಕ್ಷೇತ್ರ: ವಿಶ್ವೇಶ್ವರ ಹೆಗಡೆ ಕಾಗೇರಿ- ಬಿಜೆಪಿ

ಹಾಸನ ಕ್ಷೇತ್ರ: ಶ್ರೇಯಸ್​ ಪಟೇಲ್​-ಕಾಂಗ್ರೆಸ್

ಮಂಡ್ಯ ಕ್ಷೇತ್ರ: ಹೆಚ್​ಡಿ ಕುಮಾರಸ್ವಾಮಿ-ಜೆಡಿಎಸ್​

Leave a Comment