ಲೋಕಸಭಾ ಚುನಾವಣೆ 2024: ಮತದಾನ ಎಣಿಕೆ ಪ್ರಕ್ರಿಯೆ ಪ್ರಾರಂಭ.

Coastal Bulletin
ಲೋಕಸಭಾ ಚುನಾವಣೆ 2024: ಮತದಾನ ಎಣಿಕೆ ಪ್ರಕ್ರಿಯೆ ಪ್ರಾರಂಭ.

ನವದೆಹಲಿ: ಏಪ್ರಿಲ್‌ 19ರಿಂದ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದು ಇಂದು (ಜೂನ್‌ 4) ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಇಂಡಿಯಾ ಒಕ್ಕೂಟ ನಡುವಿನ ಸೆಣಸಾಟಕ್ಕೆ ಅಂತಿಮ ತೆರೆ ಇಂದು ಸಿಗಲಿದೆ. ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಮೋದಿ ಮತ್ತೊಮ್ಮ ಪ್ರಧಾನಿ ಗದ್ದುಗೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಶನಿವಾರ ಜೂನ್‌ 01ರಂದು ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್‌ 52 ಸ್ಥಾನಗಳನ್ನು ಪಡೆದಿತ್ತು. ಡಿಎಂಕೆ 24 ಇತರರು 164 ಸ್ಥಾನಗಳನ್ನು ಪಡೆದಿತ್ತು.

2014ರ ಲೋಕಸಭಾ

ಚುನಾವಣೆಯಲ್ಲಿ ಬಿಜೆಪಿ 282 ಕಾಂಗ್ರೆಸ್‌ 44 ಎಐಎಡಿಎಂಕೆ 37 ಇತರರು 180 ಸ್ಥಾನಗಳನ್ನು ಪಡೆದಿದ್ದವು. ಈ ಬಾರಿಯ ಚುನಾವಣಾ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟಕ್ಕೆ 350ಕ್ಕೂ ಹೆಚ್ಚಿನ ಸ್ಥಾನಗಳನ್ನು ಬರಲಿದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಮತ ಎಣಿಕೆಯು ಯಾರು ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಇಂದು ಘೋಷಣೆಯಾಗಲಿದೆ.

Leave a Comment