ಸುಭದ್ರ ಭಾರತ-ಸುರಕ್ಷಿತ ಕರ್ನಾಟಕಕ್ಕಾಗಿ ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ ಬೃಹತ್ ತಿರಂಗಾ ಯಾತ್ರೆ.

Coastal Bulletin
ಸುಭದ್ರ ಭಾರತ-ಸುರಕ್ಷಿತ ಕರ್ನಾಟಕಕ್ಕಾಗಿ ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ ಬೃಹತ್ ತಿರಂಗಾ ಯಾತ್ರೆ.

ಮೈಸೂರು : ದೇಶ ವಿಭಜನೆ,ಉಗ್ರವಾದ ಹಾಗೂ ಪಾಕ್ ಪ್ರೇಮಿಗಳ ಸಮರ್ಥನೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ರಾಷ್ಟ್ರವಿರೋಧಿ ನಿಲುವು-ನಡುವಳಿಕೆಗಳನ್ನು ಖಂಡಿಸಿ ತಿರಂಗಾ ಪಾದಯಾತ್ರೆ ಮೈಸೂರಿನಲ್ಲಿ ನಡೆಯಿತು.

ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ  ರಾಮಸ್ವಾಮಿ ವೃತ್ತದಿಂದ ಪ್ರಾರಂಭಗೊಂಡ ಯಾತ್ರೆಯು ಕಾಂಗ್ರೆಸ್ ಸರ್ಕಾರದ  ದೇಶವಿಭಜನೆಯ ಹೇಳಿಕೆ ಹಾಗೂ ಘೋಷಣೆಗಳ ವಿರುದ್ಧವಾಗಿ ದೇಶ ಮೊದಲು ಎಂಬ ಅಭಿಯಾನದ ಅಡಿಯಲ್ಲಿ ಕರುನಾಡಿನ ಸಂರಕ್ಷಣೆಗಾಗಿ ತ್ರಿವರ್ಣ ಧ್ವಜ ಹಿಡಿದು ಕಾಲ್ನಡಿಗೆಯ ತಿರಂಗ ಯಾತ್ರೆ ನಡೆಯಿತು. ಕಾಂಗ್ರೆಸ್ ಸರ್ಕಾರ ಹಾಗೂ ದೇಶ ವಿರೋಧಿ ಹೇಳಿಕೆಯನ್ನು ನೀಡಿದವರಿಗೆ ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು.

ತಿರಂಗ ಯಾತ್ರೆಯ ಉದ್ದೇಶ ಹಾಗೂ ಮೊಳಗಿದ ಘೋಷಣೆಗಳು.

 1.ಹಿಂದುಸ್ತಾನ್ ಜಿಂದಾಬಾದ್.

2.ದೇಶದ್ರೋಹಿಗಳ ದಮನಕ್ಕಾಗಿ ನಮ್ಮ ನಡೆ,ನಮ್ಮ ಯಾತ್ರೆ.

3.ಭಾರತ ಮಾತೆಯ ರಕ್ಷಣೆಗಾಗಿ ನಮ್ಮ ತಿರಂಗ ಯಾತ್ರೆ.

4.ಸದೃಢ ಭಾರತಕ್ಕಾಗಿ ನಮ್ಮ ನಡಿಗೆ.

5.ಭಯೋತ್ಪಾದಕ ಶಕ್ತಿಗಳ ಅಟ್ಟಹಾಸ ಅಳಿಯಲಿ,ಪ್ರಜೆಗಳ ಹಿತ ಉಳಿಯಲಿ. 

6.ಪಾಕಿಸ್ತಾನದ ಪರ ಘೋಷಣೆ ಕೂಗಿದವರ ವಿರುದ್ಧ ನಮ್ಮ ನಡೆ.

7.ಕರುನಾಡಿನ ರಕ್ಷಣೆಗಾಗಿ ನಮ್ಮ ನಡಿಗೆ.

8.ಭಯೋತ್ಪಾದನೆ ಕೃತ್ಯಗಳಿಂದ ನಮ್ಮ ರಾಜ್ಯವನ್ನು ರಕ್ಷಿಸಲೆಂದು ಈ ನಡಿಗೆ. 

9.ಸದೃಢ ಭಾರತಕ್ಕಾಗಿ ಸುರಕ್ಷಿತ ಕರ್ನಾಟಕ. 

10.ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವದ ಸಂರಕ್ಷಣೆಗಾಗಿ ನಮ್ನ ನಡಿಗೆ.

11.ರಾಷ್ಟ್ರ

ಸಂರಕ್ಷಣೆ ನಮ್ಮೆಲ್ಲರ ಹೊಣೆ. 

12.ಅಖಂಡ ಭಾರತವನ್ನು ಇಬ್ಬಾಗಿಸುವ  ಮನಸ್ಥಿತಿಗಳ ವಿರುದ್ಧವಾಗಿ ನಮ್ಮ  ನಡಿಗೆ.

ಚಾಮರಾಜ ಜೋಡಿ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಯಾತ್ರೆ ನಡೆಯಿತು.ಈ ಸಂದರ್ಭದಲ್ಲಿ ಮೈಸೂರು ಕೊಡಗು ಲೋಕಸಭಾ ಸಂಸದ  ಪ್ರತಾಪ್ ಸಿಂಹ ರವರು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿಎಸ್ ಶ್ರೀವತ್ಸರವರು, ರಾಜ್ಯ ಯುವ ಮೋರ್ಚಾ ಯೋಜನೆ ಹಾಗೂ ಸಂಶೋಧನೆಯ ಸಂಚಾಲಕರಾದ ಪ್ರಣಯ್,ನಗರ ಯುವ ಮೋರ್ಚಾ ಅಧ್ಯಕ್ಷ  ರಾಕೇಶ್ ಗೌಡ, ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಬಿ ಎಂ ರಘು, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್, ಡಿ ಲೋಹಿತ್, ನಗರ ಉಪಾಧ್ಯಕ್ಷಜೋಗಿ ಮಂಜು, ಮುಖಂಡರಾದ ಮಹೇಶ್ ರಾಜೇ ಅರಸ್, ವೇದರಾಜ್,ವಾಣಿಶ್, ಕಿರಣ್ ಗೌಡ, ಮನು ಅಪ್ಪಿ, ಸಂತೋಷ್, ಕಾರ್ತಿಕ್, ಪುನೀತ್, ವಿನೋದ್, ರವಿ,ಅಜಯ್ ಶಾಸ್ತ್ರಿ, ಕೃಷ್ಣಮೂರ್ತಿ ರಾವತ್, ಶಿವಾನಂದರಾವ್, ಅರ್ಜುನ್ ಸಾಗರ್, ಧನರಾಜ್ ನವೀನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Comment