ಗೀತಾ ಶಿವರಾಜ್‌ಕುಮಾರ್ ಲೋಕಸಭಾ ಚುನಾವಣಾ ಸ್ಪರ್ಧೆಗೆ ಪ್ರಣವಾನಂದ ಸ್ವಾಮೀಜಿ ವಿರೋಧ.

Coastal Bulletin
ಗೀತಾ ಶಿವರಾಜ್‌ಕುಮಾರ್ ಲೋಕಸಭಾ ಚುನಾವಣಾ ಸ್ಪರ್ಧೆಗೆ ಪ್ರಣವಾನಂದ ಸ್ವಾಮೀಜಿ ವಿರೋಧ.

ಉತ್ತರ ಕನ್ನಡ: ಸ್ಯಾಂಡಲ್​​ವುಡ್ ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ಈ ಬಾರಿ ಮತ್ತೊಮ್ಮೆ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕೆ ಪತಿ ಶಿವರಾಜ್ ಕುಮಾರ್​ ಸಹ ಸಹಮತ ವ್ಯಕ್ತಪಡಿಸಿದ್ದು, ಗೀತಾ ಎಂಪಿ ಆಗುವುದನ್ನು ನೋಡುವ ಆಸೆ ಇದೆ ಎಂದು ಹೇಳಿದ್ದಾರೆ. ಇದರ ಮಧ್ಯೆ ಅವರ ಸಮುದಾಯದ ಪ್ರಣವಾನಂದ ಸ್ವಾಮೀಜಿ, ಗೀತಾ ಶಿವರಾಜ್​ ಕುಮಾರ್ ಅವರಿಗೆ ಬೆಂಬಲ ಕೊಡುವುದಿಲ್ಲ ಎಂದು ಹೇಳಿದ್ದಾರೆ, ಇದರಿಂದ ಗೀತಾ ಶಿವರಾಜ್‌ಕುಮಾರ್ ಅವರಿಗೆ ಆರಂಭಿಕ ಆಘಾತ ಎದುರಾಗಿದ್ದು ಹಿನ್ನಡೆಯಾಗುವ ಸಾಧ್ಯತೆ ಇದೆ.

ಕಾರವಾದರದಲ್ಲಿ ಮಾತನಾಡಿದ ಈಡಿಗ ಸಮುದಾಯದ ಸ್ವಾಮಿಜಿ ಪ್ರಣವಾನಂದ ಶ್ರೀ , ಶಿವಮೊಗ್ಗ ಲೋಕಸಭೆಗೆ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದರೇ ಬೆಂಬಲ ಕೊಡುವುದಿಲ್ಲ. ದಿವಂಗತ ಡಾ. ರಾಜಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಸಿಕ್ಕರೂ ಅದನ್ನು ಒಪ್ಪಲಿಲ್ಲ. ದೊಡ್ಡ ಅವಕಾಶ ಬಂದ್ರು ಡಾ . ರಾಜಕುಮಾರ್ ರಾಜಕಾರಣಕ್ಕೆ ಹೋಗಿಲ್ಲ. ಅವರ ಕುಟುಂಬವೂ ರಾಜಕಾಣಕ್ಕೆ ಬರಬಾರದು. ಅವರಂತೆ ಇರಬೇಕು ಎಂಬಯದೇ ನನ್ನ ಭಾವನೆ

ಎಂದು ಹೇಳಿದರು.

ಅದಲ್ಲದೇ ಶಿವರಾಜ್‌ ಕುಮಾರ್‌ ಅವರ ನಡೆಗೂ ಕಿಡಿಕಾರಿರುವ ಸ್ವಾಮೀಜಿ, ಕ್ರಿಕೆಟಿಗ ಸಚಿನ ತೆಂಡೂಲ್ಕರ್‌ ಹೇಳಿಕೆ ನೀಡಿದಂತೆ ಶಿವರಾಜ್ ಕುಮಾರ್ ಹೇಳಿಕೆ ಕೊಡ್ತಾರೆ. ನಾನು ಸಿಕ್ಸ್ ಹೊಡೆದಿಲ್ಲ ನನ್ನ ಕೈ ಹೊಡೆದಿದೆ ಎಂದು ಸಚಿನ್ ಹೇಳುತ್ತಾರೆ. ರಾಜಕೀಯ ವಿಚಾರದಲ್ಲೂ ಶಿವರಾಜ್ ಕುಮಾರ್ ಅದೇ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತ ಬೆಂಬಲ ಕೊಡಲ್ಲ ಎಂದು ಹೇಳಿದ್ದಾರೆ.

Leave a Comment