ಸೌಜನ್ಯ ಅತ್ಯಾಚಾರ ಆರೋಪಿಗಳ ಪತ್ತೆಗಾಗಿ ನಾಳೆ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ.

Coastal Bulletin
ಸೌಜನ್ಯ ಅತ್ಯಾಚಾರ ಆರೋಪಿಗಳ ಪತ್ತೆಗಾಗಿ ನಾಳೆ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ.

ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಹತ್ಯಾ ಪ್ರಕರಣದ ಹೋರಾಟದ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 3ರಂದು ಭಾನುವಾರ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.ಆರೋಪಿ ಸ್ಥಾನದಲ್ಲಿದ್ದ ಸಂತೋಷ್ ರಾವ್ ನನ್ನು ಇತ್ತೀಚಿಗೆ ಸಿಬಿಐ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಈ ನಿಟ್ಟಿನಲ್ಲಿ ನೈಜ ಆರೋಪಿಗಳ ಪತ್ತೆಗಾಗಿ ದೇಶಾದ್ಯಂತ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ನಾಳಿನ ಬೆಳ್ತಂಗಡಿ  ಪ್ರತಿಭಟನಾ ಸಭೆಯಲ್ಲಿ  ಒಕ್ಕಲಿಗ ಸಮಾಜದ ಜಗದ್ಗುರು ಆದಿಚುಂಚನಗಿರಿಯ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ಸ್ಪಷ್ಟ ನಿರ್ದೇಶನದ ಮೇರೆಗೆ ಮಂಗಳೂರಿನ ಕಾವೂರು ಮಠದ ಶ್ರೀ ಶ್ರೀ  ಧರ್ಮಪಾಲನಾಥ ಸ್ವಾಮೀಜಿಯವರು  ಮಹೇಶ್ ಶೆಟ್ಟಿ

ತಿಮರೋಡಿ ನೇತೃತ್ವದ ಜನಪರ ಸಂಘಟನೆಗಳ ಮಹಾಸಭೆಗೆ ಭಾಗವಹಿಸಲಿದ್ದಾರೆ.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ  ಪ್ರಮೋದ್ ಮುತಾಲಿಕ್ ಕೂಡ ಭಾಗವಹಿಸುವ ನಿರೀಕ್ಷೆಯಿದ್ದು ಸೌಜನ್ಯ ಪರ ಹೋರಾಟಗಾರರಿಗೆ ಮತ್ತಷ್ಟು ಬಲ ಬಂದಂತಾಗಿದೆ.

ವಿಡಿಯೋ ಸಹಿತ ಸುದ್ದಿ.
https://youtu.be/mLFIdx_5MBw?si=Irxqzcna5HOyyUbx

Leave a Comment