ಎಲ್ಲಾ ಕಾಮುಕರು ನಿನ್ನ ಪಕ್ಷಕ್ಕೆ ಯಾಕೆ ಸೇರುತ್ತಿದ್ದಾರೆ ಎಂದು ಪ್ರಧಾನಿ ಮೋದಿಗೆ ಏಕವಚನದಲ್ಲೇ ಪ್ರಶ್ನಿಸಿದ ಪ್ರಕಾಶ್ ರಾಜ್.

Coastal Bulletin
ಎಲ್ಲಾ ಕಾಮುಕರು ನಿನ್ನ ಪಕ್ಷಕ್ಕೆ ಯಾಕೆ ಸೇರುತ್ತಿದ್ದಾರೆ ಎಂದು ಪ್ರಧಾನಿ ಮೋದಿಗೆ ಏಕವಚನದಲ್ಲೇ ಪ್ರಶ್ನಿಸಿದ ಪ್ರಕಾಶ್ ರಾಜ್.

ಗದಗ: ಬ್ರಿಜ್ ಭೂಷಣ್‌ನಿಂದ ಹಿಡಿದು ಪ್ರಜ್ವಲ್‌ವರೆಗೆ ಎಲ್ಲಾ ಕಾಮುಕರು ಯಾಕೆ ನಿನ್ನ ಪಾರ್ಟಿಯಲ್ಲಿ ಸೇರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಗದಗದಲ್ಲಿ ನಡೆದ ಪ್ರಕಾಶ್ ರಾಜ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅವನಿಗೂ ನನಗೂ ಸಂಬಂಧ ಇಲ್ಲ.ಪ್ರಜ್ವಲ್ ಅಣ್ಣನ ಮಗ ಅಂತಾ ಕುಮಾರಸ್ವಾಮಿ ಹೇಳ್ತಾರೆ. ವೇದಿಕೆ ಮೇಲೆ ಇವ ಮಗ ಇದ್ದಂಗ ಅಂತಾ ಹೇಳಿದ್ದು ನಾವ್ ಕೇಳಿಸಿಕೊಂಡಿಲ್ವಾ..? ಎಂದು ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಮೋದಿ, ಕುಮಾರಸ್ವಾಮಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ. 

ಯಾವುದೋ ಸರ್ಕಾರ ಬಂದೇತಿ ಹೆಣ್ ಮಕ್ಕಳಿಗೆ ಉಚಿತ ಬಸ್ ಕೊಟ್ಟಾರ. ಉಚಿತ ಬಸ್ ತಗೊಂಡು ಹೆಣ್ಣಮಕ್ಕಳು ದಾರಿ ತಪ್ಪತಾರನ..?.

ಹೆಣ್ಣಮಕ್ಕಳು ದಾರಿ ತಪ್ಪೋದು ಅಂದ್ರ ಹಳ್ಳಿಯೊಳಗ ಏನ್ ಅರ್ಥ ಗೊತ್ತನ ಆ ಮನುಷ್ಯನಿಗೆ. ಸರಿನಪ್ಪ ಹೆಣ್ಣಮಕ್ಕಳು‌ದಾರಿ ತಪ್ಪಿದ್ರು. ನಿನ್ ಮನಿ ಮಗ ದಾರಿ ತಪ್ಪಿದ್ನಲ್ಲ. ಅವಾ ಎಲ್ಲದಾನ್ ಹೇಳು ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ಮಹಿಳಾ ಸದಸ್ಯರಿಗೆ ಕೇಳ್ತೇನಿ. ಅವ್ನು ಯಾವ್ನಾದ್ರೂ ಇರ್ಲಿ ವಿಕೃತ ಕಾಮುಕ. ಅಶ್ಲೀಲ ಚಿತ್ರ ಅಲ್ಲ, ವಿಕೃತ ಕಾಮ. ಎರಡು ಸಾವಿರ ಹಣ್ಣು ಮಕ್ಕಳಯ ಕಾಣೋದಿಲ್ಲನ ನಿಮಗ. ಅವ್ರು ಹಿಂದೂಗಳಲ್ಲೇನು. ಅದ್ರ ಬಗ್ಗೆ ಪ್ರತಿಭಟನೆ ಮಾಡೋದಿಲ್ಲ ನೀವು..?. ನಾವು ಯೋಚ್ನೆ ಮಾಡದಿದ್ರೆ ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನ ಮಂಗನ್ನ ಮಾಡೋದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Leave a Comment