ದುಬೈ: ಈ ಬಾರಿಯ 'ಏಷ್ಯಾಕಪ್ ಟಿ20 ಕ್ರಿಕೆಟ್ ಚಾಂಪಿಯನ್' ಪಟ್ಟ ಶ್ರೀಲಂಕಾಗೆ ಒಲಿದಿದೆ. ಭಾನುವಾರ ರಾತ್ರಿ ಪಾಕಿಸ್ತಾನ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 23 ರನ್ಗಳ ಅಂತರದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿತು. ಆ ಮೂಲಕ 8 ವರ್ಷಗಳ ಬಳಿಕ ಏಷ್ಯಾದ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿಂದ ಕಂಗೆಟ್ಟಿರುವ ಶ್ರೀಲಂಕಾ ದೇಶದ ಜನರ ಮೊಗದಲ್ಲಿ ನಗು ಮೂಡಿಸುವಲ್ಲಿ ದಸುನ್ ಶನಕ ಪಡೆ ಯಶಸ್ವಿಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಲಂಕಾ ಪಡೆ, ಒಂದು ಹಂತದಲ್ಲಿ 58 ರನ್ಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿತು. ಬಳಿಕ ಎಡಗೈ ಬ್ಯಾಟರ್ ಭಾನುಕಾ ರಾಜಪಕ್ಷ ಅವರ ಸಾಹಸದಿಂದ 6 ವಿಕೆಟ್ಗೆ 170 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ರಾಜಪಕ್ಷರ ಅರ್ಧಶತಕದ
ಆಸರೆ ನೆರವಿನಿಂದ (71*ರನ್, 45 ಎಸೆತ, 6 ಬೌಂಡರಿ, 3 ಸಿಕ್ಸರ್) ಶ್ರೀಲಂಕಾ ತಂಡವು ಪಾಕಿಸ್ತಾನವನ್ನು ಸೋಲಿಸಿತು.
ಪಾಕ್ ತಂಡ, ವಿಕೆಟ್ ಕೀಪರ್-ಆರಂಭಿಕ ಮೊಹಮದ್ ರಿಜ್ವಾನ್(55 ರನ್, 49 ಎಸೆತ, 4 ಬೌಂಡರಿ, 1 ಸಿಕ್ಸರ್) ಪ್ರತಿರೋಧದ ಹೊರತಾಗಿಯೂ 20 ಓವರ್ಗಳಲ್ಲಿ 147 ರನ್ಗಳಿಗೆ ಅಲೌಟ್ ಆಗಿ ಸೋಲೊಪ್ಪಿಕೊಂಡಿರು. ಆ ಮೂಲಕ ಟಾಸ್ ಗೆದ್ದವರೇ ಪಂದ್ಯ ಗೆಲ್ಲುವ ಲೆಕ್ಕಾಚಾರವನ್ನೂ ತಲೆಕೆಳಗಾಗಿಸಿತು ಸಿಂಹಳೀಯರ ತಂಡ.














