ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಫೈನಲ್ ಪ್ರವೇಶ

Coastal Bulletin
ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಫೈನಲ್ ಪ್ರವೇಶ

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್‌ ಕುಸ್ತಿ ಪಟು ವಿನೇಶ್ ಪೋಗಾಟ್‌ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ವಿನೇಶ್‌ ಅಬ್ಬರದ ಪ್ರದರ್ಶನ ನೀಡಿ ಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ಮಹಿಳೆಯರ ಸೆಮೀಸ್‌ ಕುಸ್ತಿ ಪಂದ್ಯದಲ್ಲಿ ವಿನೇಶ್‌ 5-0 ಯಿಂದ ಕ್ಯೂಬಾದ ಕುಸ್ತಿಪಟು ಗುಜ್ಮನ್ ಲೋಪೆಜ್ ಅವರನ್ನು ಮಣಿಸಿ ಆರ್ಭಟಿಸಿದರು. ಈ ಮೂಲಕ ಒಲಿಂಪಿಕ್ಸ್‌ ಪದಕ ಪಕ್ಕಾ ಮಾಡಿಕೊಂಡಿದ್ದಾರೆ. ಈ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್‌ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ವಿನೇಶ್‌ ಪೋಗಟ್‌ ಅವರು ಫೈನಲ್‌ ಪ್ರವೇಶಿಸುವ ಮೂಲಕ ಪದಕವನ್ನು ಪಕ್ಕಾ ಮಾಡಿದ್ದಾರೆ. ವಿನೇಶ್ ಫೈನಲ್‌ನಲ್ಲಿ

ಜಯಗಳಿಸುವಲ್ಲಿ ಯಶಸ್ವಿಯಾದರೆ, ಒಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎಂಬ ಕೀರ್ತಿ ತಮ್ಮದಾಗಿಸಿಕೊಳ್ಳಲಿದ್ದಾರೆ.

ಭಾರತದ ಸ್ಟಾರ್‌ ಕುಸ್ತಿ ಪಟು ವಿನೇಶ್ ಪೋಗಟ್‌ ಮಂಗಳವಾರ ಅಮೋಘ ಆಟದ ಪ್ರದರ್ಶನ ನೀಡಿದ್ದಾರೆ. ತಮ್ಮ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿನೇಶ್‌ ಅವರು ವಿಶ್ವದ ನಂಬರ್‌ 1 ಆಟಗಾರ್ತಿ ಜಪಾನ್‌ ಕುಸ್ತಿ ಪಟುವಿನ ಪಟ್ಟುಗಳನ್ನು ಮೆಟ್ಟಿ ನಿಂತು ಅಂಕಗಳನ್ನು ಗಳಿಸಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದರು.

Leave a Comment